Publish Date: Fri, 24 Jul 2020 (10:50 IST)
Updated Date: Fri, 24 Jul 2020 (10:51 IST)
ಬೆಂಗಳೂರು: ನಟನಾಗಿ ಗಮನ ಸೆಳೆದಿದ್ದ ನಿಖಿಲ್ ಕುಮಾರಸ್ವಾಮಿ ಈಗ ನಿರ್ಮಾಪಕನಾಗುತ್ತಿದ್ದಾರೆ. ಅದೂ ಹೊಸಬರ ಸಿನಿಮಾಗಳಿಗೆ.
ಹಂಬಲ್ ಪೊಲಿಟಿಷಿಯನ್ ನೋಗರಾಜ್ ಎಂಬ ಸಿನಿಮಾ ನಿರ್ದೇಶಿಸಿದ್ದ ಸಾದ್ ಖಾನ್ ಹೊಸಬರೊಂದಿಗೆ ಹೊಸ ಸಿನಿಮಾ ಮಾಡಲು ಹೊರಟಿದ್ದಾರೆ. ಈ ಸಿನಿಮಾವನ್ನು ನಿಖಿಲ್ ನಿರ್ಮಿಸಲಿದ್ದಾರೆ.
ಈ ಚಿತ್ರದಲ್ಲಿ ನಿಖಿಲ್ ನಟಿಸುತ್ತಿಲ್ಲ. ಕೇವಲ ನಿರ್ಮಾಣ ಮಾಡುತ್ತಿದ್ದಾರೆ. ಮುಂದೆ ಅವಕಾಶ ಸಿಕ್ಕರೆ ಹೊಸಬರ ಸಿನಿಮಾಗಳಿಗೆ ಸಾಥ್ ಕೊಡುತ್ತೇನೆ. ಒಳ್ಳೆ ಕತೆ, ಹೊಸತನ ಕಂಡುಬಂದರೆ ಇನ್ನಷ್ಟು ಸಿನಿಮಾ ನಿರ್ಮಾಣ ಮಾಡುವೆ ಎಂದು ನಿಖಿಲ್ ಹೇಳಿಕೊಂಡಿದ್ದಾರೆ.