ಹೈದರಾಬಾದ್ : ಆಗಸ್ಟ್ ನಲ್ಲಿ ಮದುವೆಯಾಗಲಿರುವ ತೆಲುಗು ನಟ ರಾಣಾ ದಗ್ಗುಬಾಟಿ ಮತ್ತು ಮಿಹಿಕಾ ಬಜಾಜ್ ಅವರ ಮದುವೆ ಆಮಂತ್ರಣ ಪತ್ರಿಕೆಯು ಬಹಳ ವಿಭಿನ್ನವಾಗಿ, ವಿಶೇಷವಾಗಿ ಸಿದ್ಧಪಡಿಸಲಾಗಿದೆ.
ಮೇ 12ರಂದು ಎಂಗೇಜ್ ಆದ ನಟ ರಾಣಾ ದಗ್ಗುಬಾಟಿ ಮತ್ತು ಮಿಹಿಕಾ ಬಜಾಜ್ ಅವರ ಮದುವೆ ಆಗಸ್ಟ್ 8ರಂದು ಹೈದರಾಬಾದ್ ನ ಚೈತನ್ಯ ಎನ್ ಕ್ಲೇವ್ ನಲ್ಲಿ ಮಧ್ಯಾಹ್ನ 2 ಗಂಟೆಯ ಮುಹೂರ್ತದಲ್ಲಿ ನಡೆಯಲಿದೆ. ಇದಕ್ಕಾಗಿ ಆಮಂತ್ರಣ ಪತ್ರಿಕೆಯನ್ನು 2 ಮಾದರಿಯಲ್ಲಿ ಬಹಳ ವಿಭಿನ್ನವಾಗಿ ಸಿದ್ಧಪಡಿಸಲಾಗಿದೆ.
ಮಿಹಿಕಾ ಇನ್ ಸ್ಟಾಗ್ರಾಂ ನಲ್ಲಿ ಡಿಜಿಟಲ್ ಆಮಂತ್ರಣ ಪತ್ರಿಕೆಯನ್ನು ಹಂಚಿಕೊಂಡಿದ್ದು, ಅದರಲ್ಲಿ ಮದುವೆ ದಿನಾಂಕ, ಸ್ಥಳ, ಮುಹೂರ್ತದ ಜೊತೆಗೆ ರಾಣಾ-ಮಿಹಿಕಾ ಮೊದಲು ಭೇಟಿಯಾಗಿದ್ದ ದಿನಾಂಕ, ಪ್ರೀತಿಸಿದ ದಿನಾಂಕ, ಎಲ್ಲವೂ ನಮೂದಿಸಲಾಗಿದೆ.