ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಘೋಷಣೆ ಯಾವಾಗ? ಎಲ್ಲೇ ಹೋದ್ರೂ ಅವರಿಗೆ ಈ ಒಂದು ಪ್ರಶ್ನೆ ಎದುರಾಗುತ್ತದೆ.
ಇದೀಗ ಸೈಮಾ ಅವಾರ್ಡ್ ಸಮಾರಂಭಕ್ಕೆ ಬಂದಾಗಲೂ ಇದೇ ಪ್ರಶ್ನೆ ಎದುರಾಯ್ತು. ಪತ್ರಕರ್ತರು ಯಶ್ 19 ಘೋಷಣೆ ಯಾವಾಗ ಎಂದು ಪ್ರಶ್ನೆ ಮಾಡಿದ್ದರು.
ಇದಕ್ಕೆ ಉತ್ತರಿಸಿದ ಯಶ್ ಸದ್ಯಕ್ಕೆ ಸೈಮಾಗೆ ಬಂದಿದ್ದೇವೆ. ಇದರ ಬಗ್ಗೆ ಮಾತನಾಡೋಣ. ಸಿನಿಮಾ ಬರುವ ಟೈಮ್ ಗೆ
ಕರೆಕ್ಟ್ ಆಗಿ ಹೇಳ್ತೀವಿ. ಆಗಲೇ ಬರ್ತೀವಿ ಎಂದು ನಗುತ್ತಾ ಪ್ರತಿಕ್ರಿಯಿಸಿದ್ದಾರೆ.