ಬೆಂಗಳೂರು: ಪ್ರತಿಷ್ಠಿತ ಸೈಮಾ ಅವಾರ್ಡ್ಸ್ ಸಮಾರಂಭದಲ್ಲಿ ಭಾಗಿಯಾದ ರಾಕಿಂಗ್ ಸ್ಟಾರ್ ಯಶ್ ದಂಪತಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾದರು.
2022 ರ ಬಿಗ್ಗೆಸ್ಟ್ ಹಿಟ್ ಕೆಜಿಎಫ್ 2 ಸಿನಿಮಾದ ನಾಯಕ ರಾಕಿಂಗ್ ಸ್ಟಾರ್ ಯಶ್ ಎಂದರೆ ಈಗ ಬಾಲಿವುಡ್ಡಿಗರೂ ತಿರುಗಿ ನೋಡುತ್ತಾರೆ. ನಿನ್ನೆ ಪತ್ನಿ ರಾಧಿಕಾ ಪಂಡಿತ್ ಜೊತೆ ಸ್ಟೈಲಿಶ್ ಲುಕ್ ನಲ್ಲಿ ಯಶ್ ಎಂಟ್ರಿ ಕೊಡುತ್ತಿದ್ದಂತೇ ಸೈಮಾ ವೇದಿಕೆಯಲ್ಲಿ ಮಿಂಚು ಹರಿದಂತಾಗಿತ್ತು.
ಮೆಗಾಸ್ಟಾರ್ ಚಿರಂಜೀವಿ, ರಣವೀರ್ ಸಿಂಗ್, ಅಲ್ಲು ಅರ್ಜುನ್, ಪೂಜಾ ಹೆಗ್ಡೆ ಸೇರಿದಂತೆ ಸೌತ್ ಸ್ಟಾರ್ ಗಳು ಯಶ್ ಜೊತೆ ವಿಶೇಷವಾಗಿ ಮಾತುಕತೆ ನಡೆಸಿದ್ದು ಕಂಡುಬಂತು.