Daily Horoscope

Select Your Language

Notifications

webdunia
webdunia
webdunia
webdunia

ರಾಕಿ ಭಾಯ್ ಯಶ್ ಹೇರ್ ಸ್ಟೈಲ್ ಗೆ ಹೊಸ ರೂಪ

ರಾಕಿಂಗ್ ಸ್ಟಾರ್ ಯಶ್
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ತಮ್ಮ ಉದ್ದನೆಯ ಕೂದಲಿಗೆ ಹೊಸ ರೂಪ ನೀಡಿದ್ದಾರೆ. ಅವರ ಈ ಹೊಸ ಸ್ಟೈಲ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ನಿನ್ನೆಯಷ್ಟೇ ಯಶ್ ಫೋರ್ಬ್ಸ್ ಇಂಡಿಯಾ ಮ್ಯಾಗಜಿನ್ ಕವರ್ ಪೇಜ್ ನಲ್ಲಿ ಕಾಣಿಸಿಕೊಂಡ ವಿಚಾರಕ್ಕೆ ಸುದ್ದಿಯಾಗಿದ್ದರು. ಅದರ ಜೊತೆಗೆ ಅವರ ಹೇರ್ ಸ್ಟೈಲ್ ಕೂಡಾ ಸುದ್ದಿಯಾಗಿದೆ.

ಇತ್ತೀಚೆಗೆ ಮುಂಬೈಗೆ ಭೇಟಿ ನೀಡಿದ್ದ ವೇಳೆ ಯಶ್ ತಮ್ಮ ಕೂದಲಿಗೆ ಖ್ಯಾತ ಹೇರ್ ಸ್ಟೈಲಿಶ್ ಅಲೀಂ ಹಕೀಂ ಬಳಿ ಹೊಸ ರೂಪ ನೀಡಿದ್ದಾರೆ. ಉದ್ದನೆಯ ಕೂದಲಿಗೆ ಕಲರಿಂಗ್ ಮಾಡಿಸಿಕೊಂಡಿದ್ದಾರೆ.  ಬಾಲಿವುಡ್ ಸ್ಟಾರ್ ಗಳು, ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಧೋನಿ ಸೇರಿದಂತೆ ಖ್ಯಾತ ನಾಮರಿಗೆ ಹೇರ್ ಸ್ಟೈಲ್ ಮಾಡುವ ಹಕೀಂ ಬಳಿ ಯಶ್ ತಮ್ಮ ಕೂದಲಿಗೆ ಹೊಸ ವಿನ್ಯಾಸ ಮಾಡಿಸಿದ್ದಾರೆ. ಆ ವಿಡಿಯೋಗಳು ಈಗ ವೈರಲ್ ಆಗಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ದುನಿಯಾ ವಿಜಿ ಜೊತೆ ಸ್ಟಾರ್ ವಾರ್ ನೋ ಚಾನ್ಸ್ ಎಂದ ಕಿಚ್ಚ ಸುದೀಪ್