Publish Date: Tue, 12 Oct 2021 (08:55 IST)
Updated Date: Tue, 12 Oct 2021 (09:01 IST)
ಹೈದರಾಬಾದ್: ತೆಲುಗು ಕಲಾವಿದರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಫೈಟ್ ನಲ್ಲಿ ಪ್ರಕಾಶ್ ರಾಜ್ ರನ್ನು ಸೋಲಿಸಿ ವಿಜಯಿಯಾದ ನಟ ವಿಷ್ಣು ಮಂಚುಗೆ ಸ್ಯಾಂಡಲ್ ವುಡ್ ನಟಿ ಮಾಲಾಶ್ರೀ ಅಭಿನಂದನೆ ಸಲ್ಲಿಸಿದ್ದಾರೆ.
ವಿಷ್ಣು ಮಂಚು ಜತೆಗಿರುವ ಫೋಟೋ ಜೊತೆಗೆ ಮಾಲಾಶ್ರೀ ಅಭಿನಂದನೆ ಸಲ್ಲಿಸಿದ್ದಾರೆ. ಮಾಲಾಶ್ರೀ ಸ್ಯಾಂಡಲ್ ವುಡ್ ನಲ್ಲಿ ಮಿಂಚಿದರೂ ಮೂಲತಃ ತೆಲುಗಿನವರು. ಹೀಗಾಗಿ ಈಗಲೂ ತೆಲುಗು ಸಿನಿಮಾ ರಂಗದೊಂದಿಗೆ ನಂಟು ಹೊಂದಿದ್ದಾರೆ.
ಮಾ ಚುನಾವಣೆ ಪ್ರಕಾಶ್ ರಾಜ್ ಬಣ ಮತ್ತು ವಿಷ್ಣು ಮಂಚು ಬಣದ ನಡುವೆ ಪ್ರತಿಷ್ಠೆಯ ಕದನವಾಗಿತ್ತು. ಅಂತಿಮವಾಗಿ ಕನ್ನಡ ಮೂಲದ ನಟ ಪ್ರಕಾಶ್ ರಾಜ್ 8 ಸ್ಥಾನ ಗೆದ್ದರೆ ವಿಷ್ಣು ಮಂಚು 10 ಸ್ಥಾನಗಳೊಂದಿಗೆ ಅಧಿಕಾರ ಪಡೆದಿದ್ದಾರೆ.