Select Your Language

Notifications

webdunia
webdunia
webdunia
webdunia

ಫೋರ್ಬ್ಸ್ ಇಂಡಿಯಾ ಮ್ಯಾಗಜಿನ್ ನಲ್ಲಿ ರಾಕಿ ಭಾಯಿ ಯಶ್ ಹವಾ

ಫೋರ್ಬ್ಸ್ ಇಂಡಿಯಾ ಮ್ಯಾಗಜಿನ್ ನಲ್ಲಿ ರಾಕಿ ಭಾಯಿ ಯಶ್ ಹವಾ
ಬೆಂಗಳೂರು , ಸೋಮವಾರ, 11 ಅಕ್ಟೋಬರ್ 2021 (17:02 IST)
ಬೆಂಗಳೂರು: ಕೆಜಿಎಫ್ ಸಿನಿಮಾ ರಾಕಿಂಗ್ ಸ್ಟಾರ್ ಯಶ್ ರನ್ನು ನ್ಯಾಷನಲ್ ಸ್ಟಾರ್ ಮಾಡಿಬಿಟ್ಟಿದೆ. ಇದರಿಂದಾಗಿ ಈಗ ಅವರಿಗೆ ಕನ್ನಡದ ಯಾವ ನಟನಿಗೂ ಸಿಗದ ಗೌರವವೊಂದು ಸಿಕ್ಕಿದೆ.


ರಾಕಿಂಗ್ ಸ್ಟಾರ್ ಯಶ್ ಇದೀಗ ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಮ್ಯಾಗಜಿನ್ ಕವರ್ ಪೇಜ್ ನಲ್ಲಿ ಕಾಣಿಸಿಕೊಂಡಿದ್ದು, ಈ ಗೌರವ ಪಡೆದ ಮೊದಲ ಕನ್ನಡದ ನಟ ಎನಿಸಿಕೊಂಡಿದ್ದಾರೆ.

ಈ ಕವರ್ ಪೇಜ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಸ್ಟೈಲಿಶ್ ಲುಕ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಮೈಸೂರಿನಿಂದ ಸಾಮಾನ್ಯ ವ್ಯಕ್ತಿಯಾಗಿ ಬೆಂಗಳೂರಿಗೆ ಬಂದು ಇಲ್ಲಿ ಯಾರ ಬೆಂಬಲವೂ ಇಲ್ಲದೇ ಈ ಮಟ್ಟಿಗೆ ಬೆಳೆದು ನಿಂತ ಯಶ್ ಅವರ ಈ ಸಾಧನೆಗೆ ಅಭಿಮಾನಿಗಳೂ ಹೆಮ್ಮೆಪಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಲಯಾಳಂ ಸಿನಿಮಾದ ಖ್ಯಾತ ನಟ ನೆಡುಮುಡಿ ವೇಣು ಇನ್ನಿಲ್ಲ