Select Your Language

Notifications

webdunia
webdunia
webdunia
webdunia

ಕೋಟಿಗೊಬ್ಬ 3, ಸಲಗ ನಡುವೆ ಸ್ಕ್ರೀನಿಂಗ್ ಪೈಪೋಟಿ

ಕೋಟಿಗೊಬ್ಬ 3, ಸಲಗ ನಡುವೆ ಸ್ಕ್ರೀನಿಂಗ್ ಪೈಪೋಟಿ
ಬೆಂಗಳೂರು , ಮಂಗಳವಾರ, 12 ಅಕ್ಟೋಬರ್ 2021 (09:25 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಮತ್ತು ದುನಿಯಾ ವಿಜಯ್ ಅವರ ‘ಸಲಗ’ ಸಿನಿಮಾ ಒಂದೇ ದಿನ ತೆರೆ ಕಾಣುತ್ತಿದೆ.


ಎರಡೂ ಸ್ಟಾರ್ ನಟರ ಅಭಿಮಾನಿಗಳಿಗೆ ಇದು ಒಂದು ರೀತಿಯ ಹಬ್ಬ. ಈ ನಡುವೆ ಎರಡೂ ಸಿನಿಮಾಗಳು ಎಷ್ಟು ಥಿಯೇಟರ್ ಗಳಲ್ಲಿ ತೆರೆ ಕಾಣಲಿವೆ ಎಂಬ ವಿಚಾರದಲ್ಲೂ ಪೈಪೋಟಿ ನಡೆದಿದೆ.

ಕೋಟಿಗೊಬ್ಬ 3 ರಾಜ್ಯಾದ್ಯಂತ ಸುಮಾರು 350 ಥಿಯೇಟರ್ ಗಳಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಚಿತ್ರತಂಡ ಈ ಮೊದಲೇ ಹೇಳಿತ್ತು. ಸಲಗ ಕೂಡಾ ತಾನೇನು ಕಮ್ಮಿ ಎಂಬಂತೆ 300 ಥಿಯೇಟರ್ ಗಳಲ್ಲಿ ತೆರೆ ಕಾಣುತ್ತಿದೆ. ಹೀಗಾಗಿ ಈ ವೀಕೆಂಡ್ ಅಭಿಮಾನಿಗಳ ಪಾಲಿಗೆ ನಿಜಕ್ಕೂ ಹಬ್ಬವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನ ಚರ್ಚ್ ಗೆ ಸಾಮಾನ್ಯರಂತೇ ಬಂದ ತಲೈವಾ ರಜನೀಕಾಂತ್