Publish Date: Tue, 12 Oct 2021 (09:04 IST)
Updated Date: Tue, 12 Oct 2021 (09:05 IST)
ಬೆಂಗಳೂರು: ಸೂಪರ್ ಸ್ಟಾರ್ ರಜನೀಕಾಂತ್ ಮಾರು ವೇಷದಲ್ಲಿ ಜನ ಸಾಮಾನ್ಯರಂತೆ ನಗರದಲ್ಲಿ ಓಡಾಡುವುದು ಎಲ್ಲರಿಗೂ ಗೊತ್ತೇ ಇದೆ. ಈ ಬಾರಿ ರಜನಿ ಬೆಂಗಳೂರಿನ ಚರ್ಚ್ ಒಂದಕ್ಕೆ ಭೇಟಿ ನೀಡಿ ಸುದ್ದಿಯಾಗಿದ್ದಾರೆ.
ವಿವೇಕ್ ನಗರದಲ್ಲಿರುವ ಇನ್ ಫೆಂಟ್ರಿ ಚರ್ಚ್ ಗೆ ಭೇಟಿ ಕೊಟ್ಟಿರುವ ರಜನಿ ಸಾಮಾನ್ಯರೊಂದಿಗೆ ಸಾಮಾನ್ಯರಂತೇ ಕಳೆದಿದ್ದಾರೆ. ಅವರು ಸಾಮಾನ್ಯರಂತೇ ಅಲ್ಲಿ ಕಾಲ ಕಳೆದ ವಿಡಿಯೋಗಳು ವೈರಲ್ ಆಗಿವೆ.
ಮಗಳ ಅನಾರೋಗ್ಯ ನಿಮಿತ್ತ ಇಲ್ಲಿ ಹರಕೆ ಕಟ್ಟಿಕೊಂಡಿದ್ದ ರಜನಿ ಅದನ್ನು ತೀರಿಸಲೆಂದು ಇಲ್ಲಿಗೆ ಬಂದಿದ್ದಾರೆ. ಸ್ನೇಹಿತರ ಮನೆಗೆ ಭೇಟಿ ನೀಡಿ ಬಳಿಕ ಚೆನ್ನೈಗೆ ಮರಳಿದ್ದಾರೆ ಎನ್ನಲಾಗಿದೆ.