Select Your Language

Notifications

webdunia
webdunia
webdunia
webdunia

ಕುಟುಂಬ ಸಮೇತ ಅಮೆರಿಕಾಗೆ ಹಾರಿದ ರಾಕಿಂಗ್ ಸ್ಟಾರ್ ಯಶ್: video

Yash

Krishnaveni K

ಮುಂಬೈ , ಮಂಗಳವಾರ, 1 ಜುಲೈ 2025 (10:42 IST)
Photo Credit: X
ಮುಂಬೈ: ಟಾಕ್ಸಿಕ್, ರಾಮಾಯಣ ಸಿನಿಮಾದ ಒಂದು ಹಂತದ ಶೂಟಿಂಗ್ ಮುಗಿಸಿಕೊಂಡು ನಟ ರಾಕಿಂಗ್ ಸ್ಟಾರ್ ಯಶ್ ಕುಟುಂಬ ಸಮೇತ ಅಮೆರಿಕಾಗೆ ಪ್ರಯಾಣ ಬೆಳೆಸಿದ್ದಾರೆ.

ಕೆಜಿಎಫ್ ಸಿನಿಮಾ ಬಳಿಕ ಯಶ್ ನ್ಯಾಷನಲ್ ಸ್ಟಾರ್ ಆಗಿಬಿಟ್ಟಿದ್ದಾರೆ. ಇದೀಗ ಅವರು ಬಾಲಿವುಡ್ ನಲ್ಲೂ ಬೇಡಿಕೆ ಸೃಷ್ಟಿಸಿಕೊಂಡಿರುವ ನಟ. ಏಕಕಾಲಕ್ಕೆ ಎರಡು ಬಿಗ್ ಬಜೆಟ್ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಬಾಲಿವುಡ್ ನ ರಾಮಾಯಣ ಸಿನಿಮಾಗೆ ಅವರೂ ಬಂಡವಾಳ ಹೂಡಿದ್ದಾರೆ.

ಇದೀಗ ಸತತ ಶೂಟಿಂಗ್ ನಲ್ಲಿ ಯಶ್ ಬ್ರೇಕ್ ತೆಗೆದುಕೊಂಡಿದ್ದಾರೆ. ಇದೀಗ ಕುಟುಂಬ ಸಮೇತ ಅಮೆರಿಕಾಗೆ ಪ್ರಯಾಣ ಬೆಳೆಸಿದ್ದಾರೆ. ಇಲ್ಲಿ ಕೆಲವು ದಿನ ಕಾಲ ಕಳೆದು ವಾಪಸ್ ಆಗಲಿದ್ದಾರೆ.

ಮುಂಬೈ ವಿಮಾನ ನಿಲ್ದಾಣಕ್ಕೆ ಐಷಾರಾಮಿ ಹೊಸ ಕಾರಿನಲ್ಲಿ ಬಂದಿಳಿದ ಯಶ್ ಜೊತೆ ಫೋಟೋಗಾಗಿ ಅಭಿಮಾನಿಗಳು, ಪಪ್ಪಾರಾಜಿಗಳು ಮುತ್ತಿಕೊಂಡಿದ್ದಾರೆ. ಸ್ಟೈಲಿಶ್ ಲುಕ್ ನಲ್ಲಿ ಯಶ್ ಕಾಣಿಸಿಕೊಂಡಿದ್ದು, ಯಾವ ಬಾಲಿವುಡ್ ಹೀರೋವನ್ನೂ ಮೀರಿಸುವ ರೀತಿಯಲ್ಲಿದ್ದರು.



Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಕನ್ನಡ ಸೀಸನ್ 12 ಕ್ಕೆ ಕಿಚ್ಚ ಸುದೀಪ್ ಎಷ್ಟು ಸಂಭಾವನೆ ಪಡೆಯಲಿದ್ದಾರೆ