Select Your Language

Notifications

webdunia
webdunia
webdunia
webdunia

Rocking star Yash: ಉಜ್ಜೈನಿ ಮಹಾಕಾಳನಿಗೆ ಪೂಜೆ ಸಲ್ಲಿಸಿದ ರಾಕಿಂಗ್ ಸ್ಟಾರ್ ಯಶ್: ಹಿಂದಿಯಲ್ಲಿ ಮಾತನಾಡಿದ ವಿಡಿಯೋ

Yash Ujjaini

Krishnaveni K

ಉಜ್ಜೈನಿ , ಸೋಮವಾರ, 21 ಏಪ್ರಿಲ್ 2025 (11:00 IST)
Photo Credit: X
ಉಜ್ಜೈನಿ: ರಾಕಿಂಗ್ ಸ್ಟಾರ್ ಯಶ್ ಇಂದು ಉಜ್ಜೈನಿಯ ಮಹಾಕಾಳೇಶ್ವರನಿಗೆ ಪೂಜೆ ಸಲ್ಲಿಸಿದ್ದಾರೆ. ಆ ಬಳಿಕ ತಮ್ಮನ್ನು ಎದುರಾದ ಮಾಧ್ಯಮಗಳ ಜೊತೆ ಹಿಂದಿಯಲ್ಲೇ ಮಾತನಾಡಿದ್ದಾರೆ.

ಇದೀಗ ಶೂಟಿಂಗ್ ನಡುವೆ ಯಶ್ ಮಧ್ಯಪ್ರದೇಶಕ್ಕೆ ಬಂದಿದ್ದಾರೆ. ಮಧ್ಯಪ್ರದೇಶದ ಉಜ್ಜೈನಿ ಮಹಾಕಾಳೇಶ್ವರನ ಸನ್ನಧಿ ಬಹಳ ಪ್ರಖ್ಯಾತವಾದ ಶಿವನ ಸನ್ನಿಧಿಯಾಗಿದೆ. ಇಲ್ಲಿಗೆ ಸಾಕಷ್ಟು ಜನ ಸೆಲೆಬ್ರಿಟಿಗಳು, ಕ್ರಿಕೆಟಿಗರು ಬಂದು ಪೂಜೆ ಸಲ್ಲಿಸುತ್ತಿರುತ್ತಾರೆ.

ಇದೀಗ ಯಶ್ ಟಾಕ್ಸಿಕ್ ಸಿನಿಮಾ ಮತ್ತು ಬಾಲಿವುಡ್ ನ ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರ ಮಾಡುತ್ತಿದ್ದಾರೆ. ರಾವಣ ಮಹಾನ್ ಶಿವ ಭಕ್ತ. ಇದೀಗ ಈ ಸಿನಿಮಾ ಶೂಟಿಂಗ್ ಗೆ ಮುನ್ನ ಮಹಾಕಾಳೇಶ್ವರನಿಗೆ ಅಭಿಷೇಕ ಮಾಡಿದ್ದಾರೆ. ಅಲ್ಲದೆ, ಪಕ್ಕಾ ಸಾಂಪ್ರದಾಯಿಕ ಉಡುಗೆಯಲ್ಲಿ ಬಂದ ಯಶ್ ನೆಲದ ಮೇಲೆ ಕುಳಿತು ಸಂಗಡಿಗರೊಂದಿಗೆ ಮಹಾಶಿವನ ಭಜನೆ ಮಾಡಿ ಪ್ರಾರ್ಥನೆ ಮಾಡಿದ್ದಾರೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ‘ನಾನೂ ಕೂಡಾ ಉಜ್ಜೈನಿ ಮಹಾಕಾಳನ ಭಕ್ತ. ಇಲ್ಲಿಗೆ ಬಂದಿದ್ದು ತುಂಬಾ ಖುಷಿಯಾಯಿತು. ಶಿವನ ಆಶೀರ್ವಾದ ಬೇಕಾಗಿತ್ತು. ನಮ್ಮ ಮನೆದೇವರು ಶಿವ. ಹೀಗಾಗಿ ಶಿವನ ದರ್ಶನಕ್ಕೆ ಬಂದಿದ್ದೇನೆ. ಎಲ್ಲರಿಗೂ ಒಳ್ಳೆಯದಾಗಲಿ’ ಎಂದು ಹಿಂದಿಯಲ್ಲೇ ಮಾತನಾಡಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಇಟಲಿಯ ಉದ್ಯಮಿಯೊಂದಿಗೆ ಉಂಗುರ ಬದಲಾಯಿಸಿಕೊಂಡ ಅರ್ಜುನ್ ಸರ್ಜಾ ಕಿರಿಯ ಪುತ್ರಿ ಅಂಜನಾ