ಬೆಂಗಳೂರು: ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣದಲ್ಲಿ ಎರಡನೇ ಭಾರೀ ಜೈಲು ಸೇರಿದ್ದ ಬಿಗ್‌ಬಾಸ್ ಸ್ಪರ್ಧಿ ರಜತ್ ಕಿಶನ್ ಇದೀಗ ಜಾಮೀನು ಮೂಲಕ ಹೊರಬಂದಿದ್ದಾರೆ. ರಜತ್‌ಗೆ 24ನೇ ಎಸಿಎಂಎಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ರೀಲ್ಸ್ ಕೇಸ್‌ಗೆ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ರಜತ್‌ಗೆ 2 ಬಾರಿ ಪೊಲೀಸರು ನೋಟಿಸ್ ನೀಡಿದ್ದರು. ವಿಚಾರಣೆಗೆ ಹಾಜರಾಗದ ರಜತ್‌ನನ್ನು ಬಸವೇಶ್ವರನಗರ ಪೊಲೀಸರು ವಿಚಾರಣೆಗೆ ಕರೆದು ನಿನ್ನೆ ಅರೆಸ್ಟ್ ಮಾಡಿ, ಕೋರ್ಟ್ ಹಾಜರುಪಡಿಸಿದ್ದರು.
ವಿಚಾರಣೆ ಬಳಿಕ ರಜತ್‌ಗೆ 14 ದಿನಗಳ ಕಾಲ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿತ್ತು. ಈ ಆದೇಶದ ಪ್ರಕಾರ ರಜತ್ ಏ.29ರವರೆಗೆ ಪರಪ್ಪನ ಅಗ್ರಹಾರದಲ್ಲಿ ಇರಬೇಕಿತ್ತು.
ರೀಲ್ಸ್‌ಗೆ ಬಳಸಿದ್ದ ಮಚ್ಚು ಸಿಗದ ಹಿನ್ನೆಲೆ 2 ಬಾರಿ ನೋಟಿಸ್ ನೀಡಲಾಗಿತ್ತು. ಆದರೆ ಪೊಲೀಸ್ ವಿಚಾರಣೆಗೆ ಗೈರಾಗಿದ್ದಕ್ಕೆ ಅಸಮಾಧಾನಗೊಂಡಿದ್ದ ಕೋರ್ಟ್ ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಿತ್ತು