ಸಂಜಯ್ ದತ್ ಸಂಪರ್ಕಿಸಿದ್ದು ನಿಜ ಎಂದು ಒಪ್ಪಿಕೊಂಡ ರಾಕಿಂಗ್ ಸ್ಟಾರ್ ಯಶ್

ಭಾನುವಾರ, 10 ಫೆಬ್ರವರಿ 2019 (08:12 IST)
ಬೆಂಗಳೂರು: ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಲು ಬಾಲಿವುಡ್ ತಾರೆ ಸಂಜಯ್ ದತ್ ರನ್ನು ಸಂಪರ್ಕಿಸಿದ್ದು ನಿಜ ಎಂದು ರಾಕಿಂಗ್ ಸ್ಟಾರ್ ಯಶ್ ಒಪ್ಪಿಕೊಂಡಿದ್ದಾರೆ.


ಆಂಗ್ಲ ಮಾದ್ಯಮವೊಂದರ ಸಂದರ್ಶನದಲ್ಲಿ ಯಶ್ ಈ ವಿಚಾರ ಒಪ್ಪಿಕೊಂಡಿದ್ದಾರೆ. ಕೆಜಿಎಫ್ 2 ಸಿನಿಮಾದಲ್ಲಿ ಅಭಿನಯಿಸಲು ಚಿತ್ರತಂಡ ಸಂಜಯ್ ದತ್ ರನ್ನು ಕರೆತರಲು ಪ್ರಯತ್ನ ನಡೆಸಿದೆ ಎಂಬ ಸುದ್ದಿ ಬಂದಿತ್ತು.

ಕೆಜಿಎಫ್ ಚಾಪ್ಟರ್ 1 ಸಿನಿಮಾಕ್ಕೆ ಪ್ರಮುಖ ಖಳ ನಟನ ಪಾತ್ರಕ್ಕೆ ಸಂಜಯ್ ದತ್ ರನ್ನು ಸಂಪರ್ಕಿಸಿದ್ದೆವು. ಆದರೆ ಅವರು ನಿರಾಕರಿಸಿದರು. ಆದರೆ ಈಗ ಕೆಜಿಎಫ್ ಚಾಪ್ಟರ್ 1 ಸಿನಿಮಾ ವಿಶ್ವದಾದ್ಯಂತ ಅದರಲ್ಲೂ ಬಾಲಿವುಡ್ ನಲ್ಲೂ ಎಬ್ಬಿಸಿದ ಹವಾ ನೋಡಿದರೆ ಸಂಜಯ್ ದತ್ ದ್ವಿತೀಯ ಭಾಗದಲ್ಲಿ ಅಭಿನಯಿಸಲು ಒಪ್ಪಿಕೊಂಡರೂ ಅಚ್ಚರಿಯಿಲ್ಲ ಎನಿಸುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮತ್ತೊಬ್ಬ ಬಿಗ್ ಬಾಸ್ ಸ್ಪರ್ಧಿ ನೆರವಿಗೆ ಬಂದ ಶಿವರಾಜ್ ಕುಮಾರ್