Select Your Language

Notifications

webdunia
webdunia
webdunia
webdunia

ಕೆಜಿಎಫ್ ಚಾಪ್ಟರ್ 2 ಗಾಗಿ ಬಾಲಿವುಡ್ ನ ಈ ಸೂಪರ್ ಸ್ಟಾರ್ ಸ್ಯಾಂಡಲ್ ವುಡ್ ಗೆ ಬರ್ತಾರಾ?!

ಕೆಜಿಎಫ್ ಚಾಪ್ಟರ್ 2 ಗಾಗಿ ಬಾಲಿವುಡ್ ನ ಈ ಸೂಪರ್ ಸ್ಟಾರ್ ಸ್ಯಾಂಡಲ್ ವುಡ್ ಗೆ ಬರ್ತಾರಾ?!
ಬೆಂಗಳೂರು , ಶುಕ್ರವಾರ, 8 ಫೆಬ್ರವರಿ 2019 (09:59 IST)
ಬೆಂಗಳೂರು: ಕೆಜಿಎಫ್ ಚಾಪ್ಟರ್ 1 ಹೊಸ ಹವಾ ಎಬ್ಬಿಸಿದ ನಂತರ ಇದೀಗ ಕೆಜಿಎಫ್ 2 ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿದೆ. ಮೂಲಗಳ ಪ್ರಕಾರ ಕೆಜಿಎಫ್ 2 ನೇ ಅವತರಣಿಕೆಯಲ್ಲಿ ಬಾಲಿವುಡ್ ನ ಸೂಪರ್ ಸ್ಟಾರ್ ಒಬ್ಬರು ಅಭಿನಯಿಸಲಿದ್ದಾರಂತೆ!


ಸದ್ಯದಲ್ಲೇ ಕೆಜಿಎಫ್ 2 ಚಿತ್ರೀಕರಣ ಆರಂಭವಾಗಲಿದೆ. ಈ ಭಾಗದಲ್ಲಿ ರಾಕಿಂಗ್ ಸ್ಟಾರ್ ಯಶ್ ಜತೆಯಾಗಿ ಬಾಲಿವುಡ್ ನಟ ಸಂಜಯ್ ದತ್ ರನ್ನು ಪ್ರಮುಖ ಪಾತ್ರವೊಂದಕ್ಕೆ ಕರೆತರಲು ಪ್ರಯತ್ನ ನಡೆದಿದೆ ಎನ್ನಲಾಗಿದೆ.

ಆದರೆ ಈ ಬಗ್ಗೆ ಸಂಜೂ ಬಾಬು ಕಡೆಯಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ಆದರೆ ಕೆಜಿಎಫ್ 1 ಚಿತ್ರ ಹಿಂದಿಯಲ್ಲೂ ಯಶಸ್ಸು ಗಳಿಸಿದ್ದು ನೋಡಿದರೆ ಬಾಲಿವುಡ್ ಮಂದಿ ಕೂಡಾ ಈ ಸಿನಿಮಾ ಬಗ್ಗೆ ಆಸಕ್ತಿ ವಹಿಸಿದರೆ ಅಚ್ಚರಿಯಿಲ್ಲ. ಒಂದು ವೇಳೆ ಸಂಜಯ್ ದತ್ ಕೆಜಿಎಫ್ 2 ನಲ್ಲಿ ಅಭಿನಯಿಸಿದ್ದೇ ಆದರೆ 21 ವರ್ಷಗಳ ಗ್ಯಾಪ್ ನಂತರ ಮತ್ತೆ ದಕ್ಷಿಣ ಭಾರತದ ಸಿನಿಮಾವೊಂದರಲ್ಲಿ ಅಭಿನಯಿಸಿದಂತಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮಗನ ಸಿನಿಮಾ ವಿಚಾರವಾಗಿ ಪೊಲೀಸರ ಮೊರೆ ಹೋದ ಅನಿತಾ ಕುಮಾರಸ್ವಾಮಿ!