ಕೆಜಿಎಫ್ ಗೆ ಹಾಫ್ ಸೆಂಚುರಿ: ಕೊನೆಗೂ ಸಿನಿಮಾ ನೋಡಿದ ಬಾಹುಬಲಿ ಬಲ್ಲಾಳದೇವ

ಶನಿವಾರ, 9 ಫೆಬ್ರವರಿ 2019 (09:39 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಅರ್ಧಶತಕ ಭಾರಿಸಿದೆ. ವಿಶ್ವದಾದ್ಯಂತ ಕೆಜಿಎಫ್ ಬಿಡುಗಡೆಯಾಗಿ ಭಾರೀ ಯಶಸ್ಸು ಕಂಡಿತ್ತು.


ಯಶಸ್ವಿಯಾಗಿ ಅರ್ಧಶತಕ ಭಾರಿಸಿರುವ ಕೆಜಿಎಫ್ ನೂರು ಕೋಟಿ ಕ್ಲಬ್ ಗೆ ಸೇರಿದ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಇದೀಗ ಕೆಜಿಎಫ್ ಐವತ್ತು ದಿನ ಪೂರೈಸಿದ ಬಳಿಕ ಬಾಹುಬಲಿ ಖ್ಯಾತಿಯ ಬಲ್ಲಾಳದೇವ ಅಲಿಯಾಸ್ ರಾಣಾದಗ್ಗುಬಟ್ಟಿ ಸಿನಿಮಾ ನೋಡಿರುವುದಾಗಿ ಹೇಳಿಕೊಂಡಿದ್ದಾರೆ. ‘ಕೊನೆಗೂ ಕೆಜಿಎಫ್ ನೋಡಿದೆ. ತುಂಬಾ ಚೆನ್ನಾಗಿದೆ. ಯಶ್ ಮತ್ತು ಪ್ರಶಾಂತ್ ನೀಲ್ ಗೆ ಅಭಿನಂದನೆಗಳು. ಧೀರಾ ಧೀರಾ ಹಾಡು ತುಂಬಾ ಇಷ್ಟವಾಯಿತು’ ಎಂದು ಟ್ವೀಟ್‍ ಮಾಡಿದ್ದಾರೆ. ಸದ್ಯದಲ್ಲೇ ಕೆಜಿಎಫ್ 2 ಚಿತ್ರೀಕರಣ ಆರಂಭವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸುಮಲತಾ ಅಂಬರೀಶ್ ಸ್ಪರ್ಧೆಗೆ ಕಾಂಗ್ರೆಸ್-ಜೆಡಿಎಸ್ ಕಚ್ಚಾಡುತ್ತಿದ್ದರೆ ಶಾಕ್ ಕೊಡಲು ಬಿಜೆಪಿ ಸಿದ್ಧತೆ?!