Select Your Language

Notifications

webdunia
webdunia
webdunia
webdunia

ರಾಬರ್ಟ್ ಹವಾ ಇಂದಿನಿಂದ ಶುರು

ರಾಬರ್ಟ್ ಹವಾ ಇಂದಿನಿಂದ ಶುರು
ಬೆಂಗಳೂರು , ಗುರುವಾರ, 11 ಮಾರ್ಚ್ 2021 (09:11 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಇಂದಿನಿಂದ ತೆರೆಗೆ ಬಂದಿದೆ. ಬೆಳಗಿನ ಶೋಗೇ ಅದ್ಭುತ ಪ್ರದರ್ಶನ ಸಿಕ್ಕಿದೆ.


ಬೆಳಗ್ಗೆ 6 ಗಂಟೆಯ ಶೋ ನೂರಾರು ಥಿಯೇಟರ್ ಗಳಲ್ಲಿ ಯಶಸ್ವೀ ಪ್ರದರ್ಶನಗೊಂಡಿದೆ. ಮೊದಲ ಶೋ ನೋಡಿ ಬಂದವರೆಲ್ಲಾ ಸಿನಿಮಾ ಅದ್ಭುತವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೊದಲ ದಿನದ ಶೋ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದೆ. ಜೊತೆಗೆ ಈ ವಾರಂತ್ಯದಲ್ಲಿ ಮತ್ತಷ್ಟು ಜನ ಥಿಯೇಟರ್ ಗೆ ಬರುವುದು ಖಂಡಿತಾ. ಹೀಗಾಗಿ ಚಿತ್ರ ಈ ವರ್ಷದ ಮತ್ತೊಂದು ಬ್ಲಾಕ್ ಬ್ಲಸ್ಟರ್ ಹಿಟ್ ಆಗುವುದರಲ್ಲಿ ಅನುಮಾನವಿಲ್ಲ.

ಎರಡು ವರ್ಷಗಳ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿರುವ ಸಿನಿಮಾ ಬಿಡುಗಡೆಯಾದ ಖುಷಿಯಲ್ಲಿ ಅಭಿಮಾನಿಗಳ ಸಂಭ್ರಮ ಮೇರೆ ಮೀರಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ ನಿರ್ದೇಶಕ ಪ್ರಶಾಂತ್ ನೀಲ್ -ಅಲ್ಲು ಅರ್ಜುನ್ ಭೇಟಿ