Publish Date: Wed, 10 Mar 2021 (10:51 IST)
Updated Date: Wed, 10 Mar 2021 (10:53 IST)
ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಸಹಾಯಕರಾಗಿ 40 ವರ್ಷ ಕಾಲ ಜೊತೆಗಿದ್ದ ಭಾಸ್ಕರ್ ತಮ್ಮ ಪುತ್ರನ ಚಿಕಿತ್ಸೆಗೆ ಧನ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.
ಕೆಲವು ವರ್ಷಗಳ ಹಿಂದೆ ಅವರ ಕಿರಿಯ ಮಗ ಮೃತಪಟ್ಟಿದ್ದ. ಈಗ ಅವರ ಹಿರಿಯ ಮಗ ಕಿಡ್ನಿ ವೈಫಲ್ಯಕ್ಕೊಳಗಾಗಿದ್ದಾನೆ. ಇದೀಗ ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿರುವ ಭಾಸ್ಕರ್ ಚಿಕಿತ್ಸೆಗೆ ಹಣ ಹೊಂದಿಸಲು ದಾನಿಗಳ ನೆರವು ಕೋರಿದ್ದಾರೆ.
ಅವರಿಗೆ ಸಹಾಯ ಮಾಡಲು ಮನಸ್ಸಿದ್ದವರು ಫೋನ್ ಪೇ, ಗೂಗಲ್ ಪೇ ಮೂಲಕ 9449116629 ಸಂಖ್ಯೆಗೆ ಹಣ ಕಳುಹಿಸಬಹುದು. ಅಥವಾ ಕರ್ನಾಟಕ ಬ್ಯಾಂಕ್ ಚಿಕ್ಕಪೇಟೆ ಬ್ರ್ಯಾಂಚ್ ಎಸ್ ಬಿ ಖಾತೆ ನಂ.4992500104829501 ಕ್ಕೆ ಹಣ ಕಳುಹಿಸಬಹುದು.