Publish Date: Fri, 20 Mar 2026 (11:14 IST)
Updated Date: Fri, 20 Mar 2026 (11:17 IST)
ಬೆಂಗಳೂರು: ಅಧ್ಯಾಯ 2 ಇಲ್ಲಿಂದ ಶುರು ಎಂದು ಕಾಂತಾರ ಚಾಪ್ಟರ್ 2 ಘೋಷಣೆ ಮಾಡಿದ ಬೆನ್ನಲ್ಲೇ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಹೊಂಬಾಳೆ ಫಿಲಂಸ್ ಪೇಜ್ ನ್ನು ಅನ್ ಫಾಲೋ ಮಾಡಿಕೊಂಡಿದ್ದಾರೆ.
ನಿನ್ನೆ ಯುಗಾದಿ ಹಬ್ಬದ ದಿನ ರಿಷಬ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ರಿಷಬ್ ಶೆಟ್ಟಿ ಫಿಲಂಸ್ ನಿರ್ಮಾಣದ ಲೋಗೋ ಜೊತೆಗೆ ಅಧ್ಯಾಯ 2 ಇಲ್ಲಿಂದ ಶುರು ಎಂದು ಪೋಸ್ಟ್ ಹಾಕಿದ್ದರು. ಆದರೆ ಇಲ್ಲಿ ಹೊಂಬಾಳೆ ಫಿಲಂಸ್ ಲೋಗೋ ಇಲ್ಲದೇ ಇರುವುದು ಅನೇಕರು ಹುಬ್ಬೇರುವಂತೆ ಮಾಡಿತ್ತು.
ಹೀಗಾಗಿ ಇದು ಕಾಂತಾರ ಚಾಪ್ಟರ್ 2 ಬಗ್ಗೆ ಹೇಳಿದ್ದೋ ಅಥವಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದ 2 ನೇ ಭಾಗವೋ ಎಂದು ಅಭಿಮಾನಿಗಳು ಕನ್ ಫ್ಯೂಸ್ ಆಗಿದ್ದರು. ಆದರೆ ಈಗ ರಿಷಬ್ ಹೊಂಬಾಳೆ ಫಿಲಂಸ್ ಮತ್ತು ಕಾಂತಾರ ಪೇಜ್ ನ್ನು ಅನ್ ಫಾಲೋ ಮಾಡಿಕೊಂಡಿದ್ದಾರೆ.
ಈ ಮೂಲಕ ಹೊಂಬಾಳೆಯೊಂದಿಗೆ ರಿಷಬ್ ಸಂಬಂಧ ಮುರಿದುಕೊಂಡಿದ್ದಾರೆ ಎನ್ನಲಾಗಿದೆ. ಕಾಂತಾರ ಮತ್ತು ಕಾಂತಾರ ಚಾಪ್ಟರ್ 1 ಸಿನಿಮಾವನ್ನು ನಿರ್ಮಿಸಿದ್ದ ಹೊಂಬಾಳೆ ಫಿಲಂಸ್ ನಿಂದ ರಿಷಬ್ ದೂರವಾಗಿದ್ದು ಯಾಕೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಈಗ ತಮ್ಮದೇ ನಿರ್ಮಾಣ ಸಂಸ್ಥೆಯಡಿಯಲ್ಲಿ ಕಾಂತಾರ ಚಾಪ್ಟರ್ 2 ಮಾಡಲು ಹೊರಟಿದ್ದಾರೆ ಎನ್ನಲಾಗುತ್ತಿದೆ.