ಮೈಸೂರು: ಕಾಂತಾರ ಚಾಪ್ಟರ್ 1 ಸಕ್ಸಸ್ ಬಳಿಕ ರಿಷಬ್ ಶೆಟ್ಟಿ ಇಂದು ನಾಡದೇವತೆ ಚಾಮುಂಡಿ ತಾಯಿ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ. ಇದಾದ ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಕಾಂತಾರ ಚಾಪ್ಟರ್ 1 ಸಿನಿಮಾಗೆ ವಿಶ್ವದಾದ್ಯಂತೆ ಕಂಡುಬರುತ್ತಿರುವ ಪ್ರತಿಕ್ರಿಯೆ ಬಗ್ಗೆ ಅವರು ಖುಷಿ ವ್ಯಕ್ತಪಡಿಸಿದ್ದಾರೆ. ಮೊದಲು ನಮಗೆ ಕಷ್ಟವಿತ್ತು. ಈಗ ಕನ್ನಡ ಮಾತ್ರವಲ್ಲದೆ, ಎಲ್ಲಾ ಭಾಷೆಯವರೂ ಚಿತ್ರ ನೋಡಿ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದಕ್ಕೆ ಖುಷಿಯಿದೆ ಎಂದಿದ್ದಾರೆ.
ಇನ್ನು, ಫ್ಯಾನ್ಸ್ ವಾರ್ ಬಗ್ಗೆ ಅವರ ಬಳಿ ಪ್ರಶ್ನಿಸಿದಾಗ ತುಂಬಾ ಪ್ರಬುದ್ಧವಾಗಿ ಉತ್ತರಿಸಿದ್ದಾರೆ. ಫ್ಯಾನ್ಸ್ ವಾರ್ ಬಗ್ಗೆ ಎಲ್ಲಾ ಮಾತನಾಡುವಷ್ಟು ದೊಡ್ಡವನು ನಾನಲ್ಲ. ಆದರೆ ನನ್ನ ಸಿನಿಮಾವನ್ನು ಎಲ್ಲಾ ನಟರ ಅಭಿಮಾನಿಗಳೂ ವೀಕ್ಷಿಸಿದ್ದಾರೆ. ಇದಕ್ಕೆ ನಾನು ಅಭಾರಿಯಾಗಿದ್ದೇನೆ ಎಂದಿದ್ದಾರೆ.
ಇನ್ನು, ಕಾಂತಾರ ಚಾಪ್ಟರ್ 2 ಯಾವಾಗ ಎಂಬ ಪ್ರಶ್ನೆಗೆ ಅದರ ಬಗ್ಗೆ ನಾನೀಗಲೇ ಹೇಳಕ್ಕಾಗಲ್ಲ. ಸದ್ಯಕ್ಕೆ ನನ್ನ ಮುಂದಿನ ಸಿನಿಮಾ ಹನುಮಾನ್ ಎಂದಷ್ಟೇ ಹೇಳಬಲ್ಲೆ ಎಂದಿದ್ದಾರೆ.