Select Your Language

Notifications

webdunia
webdunia
webdunia
webdunia

ಜನಪ್ರಿಯ ಧಾರಾವಾಹಿ ಮಹಾಭಾರತದ ಕರ್ಣ ಪಾತ್ರಧಾರಿ ಪಂಕಜ್ ಧೀರ್ ಇನ್ನಿಲ್ಲ

Popular Serial, Mahabharata, Pankaj Dhir

Sampriya

ಮುಂಬೈ , ಬುಧವಾರ, 15 ಅಕ್ಟೋಬರ್ 2025 (15:57 IST)
Photo Credit X
ಮುಂಬೈ: ಹಿಂದಿಯ ಜನಪ್ರಿಯ ಧಾರಾವಾಹಿ ಮಹಾಭಾರತದ ಕರ್ಣ ಪಾತ್ರಧಾರಿ, ಹಿರಿಯ ನಟ ಪಂಕಜ್ ಧೀರ್ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು.

ಪಂಕಜ್ ಧೀರ್ ಅವರು ಹಲವು ವರ್ಷಗಳಿಂದಲೂ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದರು. ಇತ್ತೀಚೆಗಷ್ಟೆ ಕ್ಯಾನ್ಸರ್ ಗಾಗಿ ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಅವರು ಬುಧವಾರ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಜನಪ್ರಿಯ ಧಾರಾವಾಹಿ ಮಹಾಭಾರತದಲ್ಲಿ ಕರ್ಣನ ಪಾತ್ರಕ್ಕೆ ಪಂಕಜ್ ಧೀರ್ ಜೀವ ತುಂಬಿದ್ದರು. ಅಲ್ಲದೆ, 
 ವಿಷ್ಣು ವಿಜಯ ಚಿತ್ರದ ಅಮಿತ್ ಪಾತ್ರದಲ್ಲೂ ಮನೋಜ್ಞವಾಗಿ ಅಭಿನಯಿಸಿದ್ದರು. ನಟ ಪಂಕಜ್ ಧೀರ್ ಹಿಂದಿ, ತೆಲುಗು, ಕನ್ನಡ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿದ್ದಾರೆ. 


ಪಂಕಜ್ ಧೀರ್ ಅವರು ಸಾಹಸಸಿಂಹ ವಿಷ್ಣುವರ್ಧನ್ ಜೊತೆಗೆ ಎರಡು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ವಿಷ್ಣುವರ್ಧನ್ ಜೊತೆಗೆ ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಸಹ ನಟಿಸಿದ್ದ ವಿಷ್ಣು-ವಿಜಯ ಸಿನಿಮಾದಲ್ಲಿ ಪಂಕಜ್ ಧೀರ್ ಅವರು ಅಮಿತ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

2005 ರಲ್ಲಿ ಬಿಡುಗಡೆ ಆದ ‘ವಿಷ್ಣುಸೇನ’ ಸಿನಿಮಾನಲ್ಲಿಯೂ ಸಹ ಡಿಸಿಪಿ ಸಮರ್ಜೀತ್ ಸಿಂಗ್ ಪಾತ್ರದಲ್ಲಿ ಪಂಕಜ್ ಧೀರ್ ನಟಿಸಿದ್ದಾರೆ. ಮಾತ್ರವಲ್ಲದೆ ಕನ್ನಡದ ಕಲ್ಟ್ ಕ್ಲಾಸಿಕ್ ಸಿನಿಮಾ ಬರ ಸಿನಿಮಾನಲ್ಲಿಯೂ ಪಂಕಜ್ ನಟಿಸಿದ್ದಾರೆ.

ಪಂಕಜ್ ಧೀರ್ ಅವರು ಬಿಆರ್ ಚೋಪ್ರಾ ನಿರ್ದೇಶನದ ಮಹಾಭಾರತ ಧಾರಾವಾಹಿಯಲ್ಲಿ ಕರ್ಣನ ಪಾತ್ರ ನಿರ್ವಹಿಸಿದ್ದರು. ಈ ಪಾತ್ರ ಅವರಿಗೆ ಹಿಂದಿ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಲು ನೆರವಾಗಿತ್ತು. ಆ ಪಾತ್ರ ಅವರಿಗೆ ಭಾರಿ ದೊಡ್ಡ ಜನಪ್ರಿಯತೆ ತಂದಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿದ ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವೀನ್‌ ರಚಿತಾರಾಮ್‌