Select Your Language

Notifications

webdunia
webdunia
webdunia
webdunia

Video: ಪಂಚೆ ಕಟ್ಟೋದು ಹೇಗೆ ಹೇಳ್ಕೊಡು: ರಿಷಬ್ ಶೆಟ್ಟಿಗೆ ಬೇಡಿಕೆಯಿಟ್ಟ ಅಮಿತಾಭ್ ಬಚ್ಚನ್

Rishab Shetty-Amitabh Bacchan

Krishnaveni K

ಮುಂಬೈ , ಮಂಗಳವಾರ, 14 ಅಕ್ಟೋಬರ್ 2025 (12:08 IST)
ಮುಂಬೈ: ಕಾಂತಾರ ಚಾಪ್ಟರ್ 1 ಸಿನಿಮಾ ಹಿಟ್ ಆದ ಬೆನ್ನಲ್ಲೇ ರಿಷಬ್ ಶೆಟ್ಟಿ ಪಂಚೆ ಮತ್ತೆ ಟ್ರೆಂಡ್ ಆಗಿದೆ. ಎಷ್ಟೆಂದರೆ ಈಗ ಅಮಿತಾಭ್ ಬಚ್ಚನ್ ಅವರೇ ರಿಷಬ್ ಗೆ ಪಂಚೆ ಕಟ್ಟುವುದು ಹೇಗೆ ಎಂದು ಹೇಳಿಕೊಡು ಎಂದು ಕೇಳಿಕೊಂಡಿದ್ದಾರೆ.

ಕಾಂತಾರ ಚಾಪ್ಟರ್ 1 ಪ್ರಮೋಷನ್ ಗೆ ಮುಂಬೈಗೆ ಭೇಟಿ ನೀಡಿದ್ದ ರಿಷಬ್ ಶೆಟ್ಟಿ, ಅಮಿತಾಭ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಶೋನಲ್ಲಿ ಭಾಗಿಯಾಗಿದ್ದಾರೆ. ಶುಕ್ರವಾರ ಸಂಚಿಕೆ ಪ್ರಸಾರವಾಗಲಿದ್ದು ಇದರ ಪ್ರೋಮೋಗಳನ್ನು ಸೋನಿ ಚಾನೆಲ್ ಹೊರಬಿಟ್ಟಿದೆ.

ಈ ಪ್ರಮೋದಲ್ಲಿ ಅಮಿತಾಭ್ ಪಂಚೆ ಕಟ್ಟಿಕೊಳ್ಳುವುದು ಹೇಗೆ ಎಂದು ಹೇಳಿಕೊಡಲು ರಿಷಬ್ ಗೆ ಹೇಳುತ್ತಾರೆ. ಮೊದಲು ರಿಷಬ್ ಪಂಚೆ ಎತ್ತಿ ಕಟ್ಟಿ ಮಲಯಾಳಂ ನಟ ಮೋಹನ್ ಲಾಲ್ ಅವರ ‘ಮೋನೇ ದಿನೇಶಾ’ ಎಂದು ಹೇಳುವ ಡೈಲಾಗ್ ಹೇಳಿಕೊಂಡು ಸೀಟ್ ಗೆ ಬರುತ್ತಾರೆ.

ಸೀಟ್ ನಲ್ಲಿ ಕೂತ ಬಳಿಕ ಅಮಿತಾಭ್, ನನಗೂ ಪಂಚೆ ಕಟ್ಟಲು ಹೇಳಿಕೊಡಬೇಕು. ಇದನ್ನು ಸರಿಯಾಗಿ ಉಟ್ಟುಕೊಳ್ಳದೇ ಇದ್ದರೆ ಜಗತ್ತಿನ ಮುಂದೇ ಮಾನ ಮರ್ಯದೆ ಹೋಗುತ್ತದೆ ಎಂದು ತಮಾಷೆ ಮಾಡುತ್ತಾರೆ. ಈ ಪ್ರೋಮೋ ವಿಡಿಯೋ ಇಲ್ಲಿದೆ ನೋಡಿ.


Share this Story:

Follow Webdunia kannada

ಮುಂದಿನ ಸುದ್ದಿ

ರಿಷಬ್ ಶೆಟ್ಟಿ ಕಾಂತಾರ ಚಾಪ್ಟರ್ 2 ಬರುತ್ತಾ ಅಂದರೆ ಹೀಗೆ ಹೇಳೋದಾ