ಮುಂಬೈ: ಕಾಂತಾರ ಚಾಪ್ಟರ್ 1 ಸೂಪರ್ ಹಿಟ್ ಆದ ಬೆನ್ನಲ್ಲೇ ಹೊಂಬಾಳೆ ಫಿಲಂಸ್ ಬಿಗ್ ಸುದ್ದಿ ನೀಡಿದ್ದು, ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಜೊತೆ ರಿಷಬ್ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ.
ಕಾಂತಾರ ಚಾಪ್ಟರ್ 1 ಸಿನಿಮಾ ಈಗಾಗಲೇ ಎಲ್ಲಾ ಭಾಷೆಗಳಲ್ಲಿ ಸೇರಿ ಒಂದೇ ವಾರದಲ್ಲಿ 500 ಕೋಟಿ ಪ್ಲಸ್ ಕಲೆಕ್ಷನ್ ಮಾಡಿದೆ. ಕನ್ನಡದಂತೇ ಹಿಂದಿಯಲ್ಲೂ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಹಿಂದಿ ಸೆಲೆಬ್ರಿಟಿಗಳಿಗಾಗಿಯೇ ಹೊಂಬಾಳೆ ಫಿಲಂಸ್ ಸೆಲೆಬ್ರಿಟಿ ಶೋ ಒಂದನ್ನೂ ಆಯೋಜಿಸಿತ್ತು.
ಇದೀಗ ಹೊಂಬಾಳೆ ಫಿಲಂಸ್ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಸದ್ಯಕ್ಕೆ ಚಿತ್ರದ ಪ್ರಮೋಷನ್ ಗಾಗಿ ಮುಂಬೈನಲ್ಲಿರುವ ರಿಷಬ್ ಶೆಟ್ಟಿ ಪ್ರತಿಷ್ಠಿತ ಕೌನ್ ಬನೇಗಾ ಕರೋಡ್ ಪತಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಶೋನಲ್ಲಿ ರಿಷಬ್ ಹಾಟ್ ಸೀಟ್ ನಲ್ಲಿ ಕೂರುತ್ತಿದ್ದಾರೆ. ಈ ಎಪಿಸೋಡ್ ಸದ್ಯದಲ್ಲೇ ಪ್ರಸಾರವಾಗಲಿದೆ. ಇದಕ್ಕೆ ಮೊದಲು ಬಿಗ್ ಬಿ ಜೊತೆಗೆ ರಿಷಬ್ ಫೋಟೋಗೆ ಪೋಸ್ ನೀಡಿದ್ದನ್ನು ಹೊಂಬಾಳೆ ಫಿಲಂಸ್ ಹಂಚಿಕೊಂಡಿದೆ.