Select Your Language

Notifications

webdunia
webdunia
webdunia
webdunia

ಕಾಂತಾರ ಚಾಪ್ಟರ್ 1 ವಿರುದ್ಧ ದೈವಕ್ಕೇ ದೂರು

Kantara chapter 1

Krishnaveni K

ಬೆಂಗಳೂರು , ಗುರುವಾರ, 9 ಅಕ್ಟೋಬರ್ 2025 (14:06 IST)
ಬೆಂಗಳೂರು: ಕಾಂತಾರ ಚಾಪ್ಟರ್ 1 ಸಿನಿಮಾ ನೋಡಿದ ಬಳಿಕ ದೈವದ ಅನುಕರಣೆ ಮಾಡಿ ಅಪಹಾಸ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ದೈವಾರಾಧಕರು ದೈವಕ್ಕೇ ದೂರು ನೀಡಿದ್ದಾರೆ.

ಮಂಗಳೂರು ನಗರ ಹೊರವಲಯದ ಬಜಪೆ ಸಮೀಪದ ಪಿಲ್ಚಂಡಿ ದೈವಸ್ಥಾನಕ್ಕೆ ಭೇಟಿ ನೀಡಿ ದೈವಾರಾಧಕರು ದೈವಕ್ಕೇ ಕಾಂತಾರ ಚಾಪ್ಟರ್ 1 ಸಿನಿಮಾ ಬಳಿಕ ನಡೆಯುತ್ತಿರುವ ಚಿತ್ರತಂಡ ಮತ್ತು ಅಪಚಾರ ನಡೆಸುತ್ತಿರುವವರ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.

ದೈವದ ಅನುಕರಣೆ ಮಾಢುವ ಮೂಲಕ ದೈವಕ್ಕೆ ಅಪಚಾರ ಮಾಡಲಾಗುತ್ತಿದೆ ಎಂಬುದು ದೈವಾರಾಧಕರ ಆರೋಪವಾಗಿದೆ. ಇದರಿಂದ ಭಕ್ತರ ನಂಬಿಕೆಗೆ ಘಾಸಿಯಾಗಿದೆ. ಇದರ ವಿರುದ್ಧ ದೈವವೇ ಕ್ರಮ ಕೈಗೊಳ್ಳಲಿ ಎಂದು ದೈವಾರಾಧಕರು ದೂರು ನೀಡಿದ್ದಾರೆ.

ಕಾಂತಾರ ಚಾಪ್ಟರ್ 1 ಸಿನಿಮಾ ನೋಡಿದ ಸಂದರ್ಭದಲ್ಲಿ ಕೆಲವರು ತಮ್ಮ ಮೇಲೆ ದೈವ ಬಂದಂತೆ ಅನುಕರಣೆ ಮಾಡಿದ್ದರು. ಇದೆಲ್ಲವೂ ದೈವಾರಾಧನೆಗೆ ಮಾಡುವ ಅಪಚಾರ ಎನ್ನುವುದು ದೈವಾರಾಧಕರ ಆರೋಪವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂತಾರ ಚಾಪ್ಟರ್ 1 ಒಂದು ವಾರದಲ್ಲಿ ಗಳಿಸಿದ್ದು ಎಷ್ಟು