Select Your Language

Notifications

webdunia
webdunia
webdunia
webdunia

ಕಾಂತಾರ ಸೂಪರ್ ಹಿಟ್ ಬೆನ್ನಲ್ಲೇ ಸಿದ್ದಿವಿನಾಯಕನ ದರ್ಶನ ಪಡೆದ ರಿಷಬ್ ಶೆಟ್ಟಿ

Rishabh Shetty

Sampriya

ಬೆಂಗಳೂರು , ಶುಕ್ರವಾರ, 10 ಅಕ್ಟೋಬರ್ 2025 (18:17 IST)
Photo Credit X
ದೇಶ ವಿದೇಶದಲ್ಲೂ ಕಾಂತಾರ ಅಧ್ಯಾಯ 1ರ ಯಶಸ್ವಿನ ಖುಷಿಯಲ್ಲಿರುವ ನಟ ರಿಷಬ್ ಶೆಟ್ಟಿ ಅವರು ಇಂದು ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. 

ಭಾರೀ ನಿರೀಕ್ಷೆಗಳೊಂದಿಗೆ ಅಕ್ಟೋಬರ್ 2ರಂದು ಥಿಯೇಟರ್‌ಗೆ ಬಂದ ಕಾಂತಾರ ಚಾಪ್ಟರ್ 1 ಈಗಾಗಲೇ ಸಿನಿಮಾ ₹500 ಕೋಟಿ ಕ್ಲಬ್ ಸೇರಿದೆ. ಇದರ ಬೆನ್ನಲ್ಲೇ ಸಿದ್ದಿ ವಿನಾಯಕ ದರ್ಶನವನ್ನು ರಿಷಬ್ ಮಾಡಿದ್ದಾರೆ. 

ಇನ್ನೂ ರಿಷಬ್ ಅವರು ಬಿಳಿ ಶರ್ಟ್ ಮತ್ತು ಬಿಳಿ ಮುಂಡು ಧರಿಸಿ ದೇವಾಲಯದಲ್ಲಿ ಕಾಣಿಸಿಕೊಂಡರು. ಇನ್ನೂ ಅಭಿಮಾನಿಗಳು ನಟನ ಜತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದು,  ಫೋಟೋಗಳಿಗೆ ಪೋಸ್ ನೀಡಿ, ಬಳಿಕ ಕಾರು ಹತ್ತಿ ಹೊರಟರು. 

ಕಾಂತಾರ ಅಧ್ಯಾಯ 1 ಚಿತ್ರ ಬಿಡುಗಡೆಯಾದ ಮೊದಲ ವಾರದಲ್ಲೇ ವಿಶ್ವಾದ್ಯಂತ 500 ಕೋಟಿ ಗಳಿಸಿದೆ ಎಂದು ಹೊಂಬಾಳೆ ಫಿಲಂಸ್ ಅಧಿಕೃತವಾಗಿ ತಿಳಿಸಿದೆ. 

ವಿಶ್ವದಾದ್ಯಂತ 7 ಭಾಷೆಗಳಲ್ಲಿ ತೆರೆಕಂಡಿತ್ತು. ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಕಾಂತಾರಕ್ಕೆ ಅತ್ಯದ್ಭುತ ರೆಸ್ಪಾನ್ಸ್ ಸಿಗುತ್ತಿದ್ದು, ವಿದೇಶದಲ್ಲೂ ಕಾಂತಾರ ಚಿತ್ರಕ್ಕೆ ಅತ್ಯುತ್ತಮ ರೆಸ್ಪಾನ್ಸ್ ಸಿಗುತ್ತಿದೆ. 




Share this Story:

Follow Webdunia kannada

ಮುಂದಿನ ಸುದ್ದಿ

My god, it was mind-blowing: ರಿಷಬ್ ನಟನೆ ನಿರ್ದೇಶನಕ್ಕೆ ಸ್ಟಾರ್ ಡೈರೆಕ್ಟರ್ ಅಟ್ಲೀ ಫಿದಾ