Photo Credit: social media
ಬೆಂಗಳೂರು: ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ರಿಷಬ್ ಶೆಟ್ಟಿ ತಾಯಿ ಪಾತ್ರ ಮಾಡಿದವರು ನಿಜಕ್ಕೂ ಯಾರು ಎಂದು ಕೇಳಿದ್ರೆ ಶಾಕ್ ಆಗ್ತೀರಿ.
ಕಾಂತಾರ ಚಾಪ್ಟರ್ 1 ಅಕ್ಟೋಬರ್ 2 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿ ಈಗ 650 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿದೆ. ಈ ಸಿನಿಮಾ ಈಗಲೂ ಥಿಯೇಟರ್ ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರೂ ಎಲ್ಲಾ ಪಾತ್ರಗಳ ಅಭಿನಯವೂ ಸೂಪರ್ ಎಂದು ಕೊಂಡಾಡುತ್ತಿದ್ದಾರೆ.
ಈ ಸಿನಿಮಾದಲ್ಲಿ ರಿಷಬ್ ತಾಯಿ ಪಾತ್ರ ಪ್ರಮುಖ ಪಾತ್ರಗಳಲ್ಲಿ ಒಂದಾಗಿದೆ. ನಾಯಕ ಬೆರ್ಮೆ ಇಡೀ ಕಾಂತಾರಕ್ಕೆ ನಾಯಕನಂತಿದ್ದರೆ ಆತನ ತಾಯಿ ರಾಜಮಾತೆಯಂತಿರುತ್ತಾಳೆ. ಮಗನನ್ನು ಸರಿಯಾದ ದಾರಿಯಲ್ಲಿ ನಡೆಸುವ ಮಹಾಮಾತೆಯಂತೆ ಕಾಣಿಸುತ್ತಾಳೆ.
ಅಷ್ಟಕ್ಕೂ ಬೆರ್ಮೆಯ ಪಾತ್ರ ಮಾಡಿದವರು ಯಾರು ಗೊತ್ತಾ? ಇವರು ಸ್ಯಾಂಡಲ್ ವುಡ್ ನ ಖ್ಯಾತ ನಟ ರಂಗಾಯಣ ರಘು ಪತ್ನಿ ಮಂಗಳಾ ಎನ್ನುವುದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಮಂಗಳಾ ಮೂಲತಃ ರಂಗಭೂಮಿ ಹಿನ್ನಲೆಯುಳ್ಳವರು. ಸಂಚಾರಿ ಎನ್ನುವ ನಾಟಕ ಸಂಸ್ಥೆ ಕಟ್ಟಿಕೊಂಡು ತಾವೇ ನಾಟಕಗಳನ್ನ ನಿರ್ದೇಶನ ಮಾಡಿ ಅಭಿನಯಿಸುವ ಚತುರೆ. ಸಿನಿಮಾಗಳಲ್ಲೂ ಸಣ್ಣ ಪುತ್ರ ಮಾಡಿದ್ದರು. ಇದೀಗ ಕಾಂತಾರ ಚಾಪ್ಟರ್ 1 ರಲ್ಲಿ ಸಹಜ ಅಭಿನಯದ ಮೂಲಕ ಗಮನಸೆಳೆದಿರುವ ಅವರು ಸ್ಯಾಂಡಲ್ ವುಡ್ ಗೆ ಹೊಸ ಅಮ್ಮ ಸಿಕ್ಕಂತಾಗಿದ್ದಾರೆ.