Publish Date: Tue, 18 Aug 2020 (12:22 IST)
Updated Date: Tue, 18 Aug 2020 (12:24 IST)
ಬೆಂಗಳೂರು: ನಿರ್ದೇಶಕನಾಗಿ ಚಿತ್ರರಂಗಕ್ಕೆ ಕಾಲಿಟ್ಟ ರಿಷಬ್ ಶೆಟ್ಟಿ ಈಗ ನಾಯಕ ನಟನಾಗಿ ಮಿಂಚುತ್ತಿದ್ದಾರೆ. ರಿಷಬ್ ಇತ್ತೀಚೆಗೆ ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಇದೀಗ ಲಾಕ್ ಡೌನ್ ಬ್ರೇಕ್ ಬಳಿಕ ಹೊಸ ಸಿನಿಮಾಗಳ ಚಿತ್ರೀಕರಣಕ್ಕೆ ಹೊಸದಾಗಿ ರೆಡಿಯಾಗಿದ್ದಾರೆ.
ರಿಷಬ್ ಈಗ ಮತ್ತಷ್ಟು ಹ್ಯಾಂಡ್ಸಮ್ ಆಗಿದ್ದಾರೆ. ಗಡ್ಡ, ಮೀಸೆ ಟ್ರಿಮ್ ಮಾಡಿಕೊಂಡು ತಮ್ಮ ಹೊಸ ಅವತಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
ಶೆಟ್ಟರು ನಾಯಕರಾಗಿರುವ ‘ಹರಿಕತೆ ಅಲ್ಲ ಗಿರಿಕತೆ’ ಸಿನಿಮಾ ಸದ್ಯದಲ್ಲೇ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ. ಈ ಸಿನಿಮಾಗಾಗಿಯೇ ಈ ಹೊಸ ಲುಕ್ಕಾ ಎನ್ನುವುದು ಗೊತ್ತಾಗಿಲ್ಲ.