Publish Date: Mon, 21 Sep 2020 (10:37 IST)
Updated Date: Mon, 21 Sep 2020 (10:39 IST)
ಉಡುಪಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಲವು ಗ್ರಾಮಗಳು ನೀರಿನಲ್ಲಿ ಮುಳುಗಿವೆ. ಈ ನಡುವೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ನೆರೆಪೀಡಿತರ ನೆರವಿಗೆ ಬಂದಿದ್ದಾರೆ.
ತಮ್ಮ ತವರೂರಿನ ಸಂಕಷ್ಟ ಸ್ಥಿತಿಗೆ ಮರುಗಿರುವ ರಿಷಬ್ ಸಹಾಯ ವಾಣಿಗಳ ಮಾಹಿತಿ ನೀಡುವ ಮೂಲಕ ಸಹಾಯ ಪಡೆಯಲು ಕೋರಿದ್ದಾರೆ. ಅಲ್ಲದೆ, ಸಂಕಷ್ಟಕ್ಕೀಡಾದವರ ನೆರವಿಗೆ ಬರುವಂತೆ ಮನವಿ ಮಾಡಿದ್ದಾರೆ. ಮಳೆಯಿಂದಾಗಿ ಹಲವು ಗ್ರಾಮಗಳು ಜಲಾವೃತವಾಗಿದ್ದು, ಎನ್ ಡಿಆರ್ ಎಫ್ ಸಿಬ್ಬಂದಿ ರಕ್ಷಣೆಗೆ ಧಾವಿಸಿದ್ದಾರೆ.