ಬೆಂಗಳೂರು: ಹಿರಿಯ ನಿರ್ದೇಶಕ ದಿನೇಶ್ ಬಾಬು ಅವರ ‘ಕಸ್ತೂರಿ ಮಹಲ್’ ಸಿನಿಮಾದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದ ರಚಿತಾ ರಾಮ್ ಈಗ ಇದ್ದಕ್ಕಿದ್ದಂತೆ ಚಿತ್ರದಿಂದ ಹೊರನಡೆದಿದ್ದಾರೆ.
ರಚಿತಾ ತಾವು ಈಗಾಗಲೇ 8 ಚಿತ್ರಗಳಲ್ಲಿ ಬ್ಯುಸಿಯಿರುವುದರಿಂದ ಇದಕ್ಕೆ ಡೇಟ್ ಹೊಂದಿಸಲು ಸಾಧ್ಯವಾಗದು ಎಂಬ ಕಾರಣ ನೀಡಿ ಚಿತ್ರದಿಂದ ಹೊರಬಂದಿದ್ದಾರೆ. ಆದರೆ ಮೂಲಗಳ ಪ್ರಕಾರ ರಚಿತಾ ಸ್ಕ್ರಿಪ್ಟ್ ನಲ್ಲಿ ಕೆಲವು ಬದಲಾವಣೆ ಬಯಸಿದ್ದರು. ಆದರೆ ಅದಕ್ಕೆ ದಿನೇಶ್ ಬಾಬು ಒಪ್ಪದ ಕಾರಣ ಚಿತ್ರದಿಂದ ಹೊರಬಂದಿದ್ದಾರೆ ಎನ್ನಲಾಗಿದೆ. ಆದರೆ ಈಗಾಗಲೇ ಅಡ್ವಾನ್ಸ್ ಕೂಡಾ ಪಡೆದುಕೊಂಡ ಮೇಲೆ ಇದ್ದಕ್ಕಿದ್ದ ಹಾಗೆ ಚಿತ್ರದಿಂದ ಹೊರಬಂದಿರುವ ರಚಿತಾ ನಿರ್ಧಾರ ದಿನೇಶ್ ಬಾಬು ಅಸಮಾಧಾನಕ್ಕೆ ಕಾರಣವಾಗಿದೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!