Select Your Language

Notifications

webdunia
webdunia
webdunia
webdunia

ರೇಣುಕಾಸ್ವಾಮಿ ಮರ್ಡರ್ ಕೇಸ್ ಟ್ರಯಲ್ ಇಂದಿನಿಂದ: ರೇಣುಕಾ ಪೋಷಕರ ಹೇಳಿಕೆ ದರ್ಶನ್ ಗೆ ಪ್ಲಸ್ ಪಾಯಿಂಟ್ ಆಗುತ್ತಾ

Renukaswamy-Darshan
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನ ಕೋರ್ಟ್ ಟ್ರಯಲ್ ಇಂದಿನಿಂದ ಆರಂಭವಾಗಿದೆ. ಇಂದು ರೇಣುಕಾ ತಂದೆ, ತಾಯಿ ವಿಚಾರಣೆ ನಡೆಯಲಿದೆ. ಆದರೆ ಅವರ ಹೇಳಿಕೆಗೆ ದರ್ಶನ್ ಗೆ ಪ್ಲಸ್ ಪಾಯಿಂಟ್ ಆದರೂ ಅಚ್ಚರಿಯಿಲ್ಲ.

ರೇಣುಕಾಸ್ವಾಮಿ ಮರ್ಡರ್ ಕೇಸ್ ನ ವಿಚಾರಣೆ ಇಂದಿನಿಂದ ಆರಂಭವಾಗಲಿದೆ. ಈಗಾಗಲೇ ದೋಷಾರೋಪ ನಿಗದಿಯಾಗಿದ್ದು ಇದೀಗ ಅಧಿಕೃತವಾಗಿ ವಿಚಾರಣೆ ಆರಂಭವಾಗಲಿದೆ. ಈ ಸಂಬಂಧ ಇಂದು ರೇಣುಕಾ ತಂದೆ ಕಾಶೀನಾಥಯ್ಯ ಮತ್ತು ತಾಯಿ ಪ್ರತಿಭಾ ಅವರಿಗೆ ಕೋರ್ಟ್ ಸಮನ್ಸ್ ನೀಡಿದೆ.

ರೇಣುಕಾಸ್ವಾಮಿ ಮನೆ ಬಿಟ್ಟಿದ್ದು, ಚಿತ್ರದುರ್ಗದಿಂದ ಬೆಂಗಳೂರಿಗೆ ಹೊರಡುವಾಗ ಕೊನೆಯ ಬಾರಿಗೆ ಕರೆ ಮಾಡುವಾಗ ಏನು ಹೇಳಿದ್ದರು ಎಂಬಿತ್ಯಾದಿ ವಿವರಗಳನ್ನು ಕೋರ್ಟ್ ಮುಂದೆ ಹೇಳಲಿದ್ದಾರೆ. ಆದರೆ ಈ ವೇಳೆ ರೇಣುಕಾಸ್ವಾಮಿ ಪೋಷಕರ ಹೇಳಿಕೆ ದರ್ಶನ್ ಗೆ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯಿದೆ.

ಯಾಕೆಂದರೆ ಚಿತ್ರದುರ್ಗದಿಂದ ಹೊರಟ ರೇಣುಕಾಸ್ವಾಮಿ ಕೊನೆಯ ಬಾರಿಗೆ ಕರೆ ಮಾಡುವಾಗ ತಾನು ಸ್ನೇಹಿತರ ಜೊತೆಗೆ ಹೋಗಿದ್ದೇನೆ ಎಂದಿದ್ದನೇ ಹೊರತು ದರ್ಶನ್ ಅಥವಾ ಸಹಚರರ ಹೆಸರು ಹೇಳಿರಲಿಲ್ಲ. ಇನ್ನು ರೇಣುಕಾಸ್ವಾಮಿ ಕೂಡಾ ಯಾವತ್ತೂ ಪವಿತ್ರಾ ಗೌಡಗೆ ಮೆಸೇಜ್ ಮಾಡಿದ್ದರ ಬಗ್ಗೆ ಹೇಳಿರಲಿಲ್ಲ. ಹೀಗಾಗಿ ಈ ಹೇಳಿಕೆಗೆ ದರ್ಶನ್ ಗೆ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

OG ನಟನಿಗೆ ಸರ್ಪ್ರೈಸ್ ಗಿಫ್ಟ್ ನೀಡಿದ ನಟ, ಡಿಸಿಎಂ ಪವನ್ ಕಲ್ಯಾಣ್