ಬೆಂಗಳೂರು: ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಇಂದು ಥಿಯೇಟರ್ ಗಳಲ್ಲಿ ರಿಲೀಸ್ ಆಗಿದೆ. ಪತಿ ಮಾಡಬೇಕಾದ ಕೆಲಸವನ್ನು ಪತ್ನಿ ವಿಜಯಲಕ್ಷ್ಮಿ ಮಗನ ಜೊತೆ ಮಾಡಿದ್ದಾರೆ.
ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ದರ್ಶನ್ ಜೈಲಿನಲ್ಲಿರುವಾಗ ಡೆವಿಲ್ ಸಿನಿಮಾ ಇಂದು ಬಿಡುಗಡೆಯಾಗಿದೆ. ಸಾಮಾನ್ಯವಾಗಿ ತಮ್ಮ ಸಿನಿಮಾ ಬಿಡುಗಡೆಯಾದಾಗ ದರ್ಶನ್ ತಾವೇ ಥಿಯೇಟರ್ ವಿಸಿಟ್ ಮಾಡುತ್ತಾರೆ ಮತ್ತು ಸಿನಿಮಾ ಪ್ರಮೋಷನ್ ಮಾಡುತ್ತಾರೆ.
ಆದರೆ ಈ ಬಾರಿ ಅದು ಸಾಧ್ಯವಾಗುತ್ತಿಲ್ಲ. ಹೀಗಾಗಿ ದರ್ಶನ್ ಮಾಡಬೇಕಾದ ಕೆಲಸವನ್ನು ವಿಜಯಲಕ್ಷ್ಮಿ ಮಾಡುತ್ತಿದ್ದಾರೆ. ಪತಿಯ ಬದಲಿಗೆ ತಾವೇ ಥಿಯೇಟರ್ ವಿಸಿಟ್ ಮಾಡಿ ಸಿನಿಮಾ ಪ್ರಮೋಷನ್ ಮಾಡುತ್ತಿದ್ದಾರೆ. ಇಂದು ಬೆಳಿಗ್ಗೆಯೇ ಮಗ ವಿನೇಶ್ ಜೊತೆ ಅಭಿಮಾನಿಗಳ ಜೊತೆ ಫಸ್ಟ್ ಶೋ ವೀಕ್ಷಿಸಿದ್ದಾರೆ.
ಬೆಳ್ಳಂ ಬೆಳಿಗ್ಗೆ ಟಿಕೆಟ್ ಗೆ ಪೂಜೆ ಮಾಡಿದ ವಿಜಯಲಕ್ಷ್ಮಿ ಪುತ್ರ ವಿನೇಶ್ ತಮ್ಮ ಆಪ್ತರ ಜೊತೆ ಥಿಯೇಟರ್ ಗೆ ಬಂದು ಸಿನಿಮಾ ವೀಕ್ಷಿಸಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲೂ ದರ್ಶನ್ ಪರವಾಗಿ ತಾವೇ ಖುದ್ದಾಗಿ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ.