ಬೆಂಗಳೂರು: ದರ್ಶನ್ ನಾಯಕರಾಗಿರುವ ಡೆವಿಲ್ ಸಿನಿಮಾ ನಿನ್ನೆ ಬಿಡುಗಡೆಯಾಗಿತ್ತು. ಈ ಸಿನಿಮಾ ಮೊದಲ ದಿನ ಗಳಿಸಿದ ಮೊತ್ತದ ಬಗ್ಗೆ ಹಲವು ಅಂತೆ ಕಂತೆಗಳು ಬರುತ್ತಿವೆ. ಹಾಗಿದ್ದರೆ ಮೊದಲ ದಿನವೇ 30 ಕೋಟಿ ರೂ.ಗಳಷ್ಟು ಗಳಿಸಿದ್ದು ನಿಜಾನಾ?
ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ನಟ ದರ್ಶನ್ ಸದ್ಯಕ್ಕೆ ಜೈಲಿನಲ್ಲಿದ್ದಾರೆ. ಇದರ ನಡುವೆಯೂ ಡೆವಿಲ್ ಸಿನಿಮಾ ಬಿಡುಗಡೆಯಾಗಿದೆ. ಮೊದಲ ದಿನ ದರ್ಶನ್ ಅಭಿಮಾನಿಗಳು ಥಿಯೇಟರ್ ಗೆ ಹೋಗಿ ಸಿನಿಮಾ ನೋಡಿಕೊಂಡು ಬಂದಿದ್ದು ಉತ್ತಮ ಪ್ರತಿಕ್ರಿಯೆ ನೀಡಿದ್ದರು.
ಪತಿಯ ಬದಲು ಸ್ವತಃ ವಿಜಯಲಕ್ಷ್ಮಿ ದರ್ಶನ್ ಥಿಯೇಟರ್ ವಿಸಿಟ್ ಮಾಡಿ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿದ್ದರು. ದರ್ಶನ್ ಅಭಿಮಾನಿಗಳು ಮೊದಲ ದಿನ ಸಿನಿಮಾ 30 ಕೋಟಿ ಗಳಿಸಿದೆ, ದಾಖಲೆಯ ಗಳಿಕೆ ಮಾಡಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೆಮ್ಮೆ ಪಟ್ಟುಕೊಳ್ಳುತ್ತಿದ್ದಾರೆ.
ಆದರೆ ಅಸಲಿಗೆ ಅಷ್ಟೊಂದು ಗಳಿಕೆ ಡೆವಿಲ್ ಮಾಡಿಲ್ಲ. ಮಾರುಕಟ್ಟೆ ಮೂಲಗಳ ಪ್ರಕಾರ ಮೊದಲ ದಿನ ಡೆವಿಲ್ ಗಳಿಸಿದ್ದು ಸುಮಾರು 10 ಕೋಟಿ ರೂ. ಮಾತ್ರ. ಬುಕ್ ಮೈ ಶೋನಲ್ಲಿ ವಾರಂತ್ಯಕ್ಕೆ ಈಗಲೂ ಬೆಂಗಳೂರಿನಲ್ಲಿ ಬಹುತೇಕ ಚಿತ್ರಮಂದಿರಗಳಲ್ಲಿ ಇನ್ನೂ ಟಿಕೆಟ್ ಫಿಲ್ ಆಗಿಲ್ಲ. ಈ ಮೊದಲು ದರ್ಶನ್ ಸಿನಿಮಾಗಳಿಗೆ ಹೋಲಿಸಿದರೆ ಡೆವಿಲ್ ಗೆ ಕೊಂಚ ಕಡಿಮೆ ಬೇಡಿಕೆ ಎನ್ನಬಹುದು. ಆದರೆ ಚಿತ್ರ ನೋಡಿ ಬಂದವರು ಚೆನ್ನಾಗಿದೆ ಎಂದಿದ್ದಾರೆ. ಹೀಗಾಗಿ ಸಿನಿಮಾ ವಾರಂತ್ಯದಲ್ಲಿ ಕಲೆಕ್ಷನ್ ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗಿದೆ.