Webdunia - Bharat's app for daily news and videos

Install App

ಪವಿತ್ರಾ ಗೌಡ ಜೊತೆ ಡೀಲ್ ಮಾಡಿಕೊಂಡಿದ್ದ ರೇಣುಕಾಸ್ವಾಮಿ

Krishnaveni K
ಶುಕ್ರವಾರ, 6 ಸೆಪ್ಟಂಬರ್ 2024 (16:35 IST)
ಬೆಂಗಳೂರು: ಹತ್ಯೆಯಾದ ರೇಣುಕಾಸ್ವಾಮಿ ಮತ್ತು ಪವಿತ್ರಾ ಗೌಡ ನಡುವಿನ ಚ್ಯಾಟಿಂಗ್ ರಹಸ್ಯಗಳು ಈಗ ಒಂದೊಂದೇ ಬಯಲಾಗುತ್ತಿದೆ. ಪವಿತ್ರಾ ಗೌಡ ಜೊತೆ ರೇಣುಕಾಸ್ವಾಮಿ 10 ಸಾವಿರ ರೂ.ಗಳ ಡೀಲ್ ಮಾಡಿಕೊಂಡಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ.

ಸಣಕಲು ದೇಹದ ರೇಣುಕಾಸ್ವಾಮಿ ಮನೆಯವರ ಮುಂದೆ ಸಂಭಾವಿತನಾಗಿಯೇ ಇದ್ದರೂ ಆತನ ಚ್ಯಾಟಿಂಗ್ ಹಿನ್ನಲೆ ನೋಡುತ್ತಿದ್ದರೆ ಎಂಥಾ ಖತರ್ನಾಕ್ ಕೆಲಸ ಮಾಡಿದ್ದ ಎನ್ನುವುದು ಗೊತ್ತಾಗುತ್ತಿದೆ. ತನ್ನೊಡನೆ ಚ್ಯಾಟ್ ಮಾಡುತ್ತಿರುವುದು ಪವಿತ್ರಾ ಎಂದು ತಿಳಿದಿದ್ದ ರೇಣುಕಾಸ್ವಾಮಿ ರಂಗು ರಂಗಾಗಿ ಚ್ಯಾಟ್ ಮಾಡಿದ್ದ.

ನೀನು ಸೆಕ್ಸೀ ಕಣೇ.. ನೀನು ತುಂಬಾ ಬ್ಯೂಟಿಫುಲ್. ನಿನ್ನನ್ನು ಒಮ್ಮೆ ನೋಡಬೇಕು ಎಂದೆಲ್ಲಾ ಪಕ್ಕಾ ಕಾಮುಕ ಚ್ಯಾಟಿಂಗ್ ಮಾಡಿದ್ದ ಎಂಬ ಅಂಶಗಳು ಈಗ ಬಯಲಾಗಿದೆ. ಇದರ ಜೊತೆಗೆ ಪವಿತ್ರಾ ಜೊತೆ 10 ಸಾವಿರ ರೂ.ಗಳ ಡೀಲಿಂಗ್ ಕೂಡಾ ಮಾಡಿದ್ದ ಎಂಬ ಮಾತು ಕೇಳಿಬರುತ್ತಿದೆ.

ಪವಿತ್ರಾ ಸಹವಾಸಕ್ಕಾಗಿ ಪ್ರತೀ ತಿಂಗಳು 10 ಸಾವಿರ ರೂ. ಕೊಡುವುದಾಗಿಯೂ ಡೀಲಿಂಗ್ ಮಾಡಿದ್ದ ಎನ್ನಲಾಗಿದೆ. ಆದರೆ ಅಸಲಿಗೆ ಅಲ್ಲಿ ಚ್ಯಾಟ್ ಮಾಡುತ್ತಿದ್ದುದು ಪವನ್ ಎಂಬ ವಿಚಾರವೇ ಆತನಿಗೆ ಗೊತ್ತಿರಲಿಲ್ಲ. ಇಂತಹ ರಂಗು ರಂಗಿನ ಮಾತಿನ ಮೂಲಕ ರೇಣುಕಾಸ್ವಾಮಿಯನ್ನು ದರ್ಶನ್ ಆಂಡ್ ಗ್ಯಾಂಗ್ ತಮ್ಮ ಬಲೆಗೆ ಬೀಳಿಸಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಾಮನ ಪಾತ್ರಕ್ಕೆ ಜೀವನಶೈಲಿಯನ್ನೇ ಬದಲಾಯಿಸಿಕೊಂಡ ರಣಬೀರ್ ಕಪೂರ್

ಅಪ್ಪು ಫೋಟೋ ಬರುತ್ತೆ ಗೋಳೋ ಅಂತ ಅಳ್ತಾರೆ: ಮದುವೆಯಾದ್ರೂ ಅನುಶ್ರೀಗೆ ತಪ್ಪಲಿಲ್ಲ ಟ್ರೋಲ್ ಕಾಟ

ಸೋತ ಘಾಟಿ, ಅಭಿಮಾನಿಗಳಿಗೆ ಸಂದೇಶ ಕಳುಹಿಸಿದ ಅನುಷ್ಕಾ ಶೆಟ್ಟಿ

ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ಕೊಟ್ಟ ಬಳಿಕವೂ ಡಿಕೆ ಶಿವಕುಮಾರ್ ಮರೆಯದ ಹಿರಿಯ ನಟಿಯರು

ಡಾ ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ಬೆನ್ನಲ್ಲೇ ಕುಟುಂಬಸ್ಥರಿಂದ ಮಹತ್ವದ ನಿರ್ಧಾರ

ಮುಂದಿನ ಸುದ್ದಿ
Show comments