Select Your Language

Notifications

webdunia
webdunia
webdunia
Wednesday, 2 April 2025
webdunia

ನಟ ದರ್ಶನ್ ಜೈಲಿನಲ್ಲಿ ಮಾಡಿದ ಖರ್ಚು ವೆಚ್ಚವೆಷ್ಟು ವಿವರ ಇಲ್ಲಿದೆ

Darshan Thoogudeepa

Krishnaveni K

ಬಳ್ಳಾರಿ , ಶುಕ್ರವಾರ, 6 ಸೆಪ್ಟಂಬರ್ 2024 (15:30 IST)
ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಜೈಲಿನಲ್ಲಿ ಕಳೆದ ಎಂಟು ದಿನಗಳಲ್ಲಿ ಎಷ್ಟು ಖರ್ಚು ಮಾಡಿದ್ದಾರೆ ಎಂಬ ಅಂಶ ಈಗ ಬಯಲಾಗಿದೆ.

ಸದ್ಯಕ್ಕೆ ಅವರು ಬಳ್ಳಾರಿ ಜೈಲಿನಲ್ಲಿದ್ದಾರೆ. ಕಳೆದ ಎಂಟು ದಿನಗಳಿಂದ ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್ ಮಾಡಿದ್ದ ಖರ್ಚು ವೆಚ್ಚವೆಷ್ಟು ಎಂಬುದು ಈಗ ಬಹಿರಂಗವಾಗಿದೆ. ಜೈಲಿನಲ್ಲಿ ಸಾಮಾನ್ಯ ಕಾಫಿ, ತಿಂಡಿಗಾಗಿ ದರ್ಶನ್ ಮಾಡಿದ ಖರ್ಚೆಷ್ಟು ಎಂಬುದು ಈಗ ಬಯಲಾಗಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ದರ್ಶನ್ ಆಂಡ್ ಗ್ಯಾಂಗ್ ಗೆ ಸಾಕಷ್ಟು ಸವಲತ್ತುಗಳು ಸಿಗುತ್ತಿದ್ದವು. ದರ್ಶನ್ ಬೇಕಾದಂತೆ ಕಾಫಿ, ಟೀ, ಸಿಗರೇಟು ಸಮಾರಾಧನೆಯಾಗುತ್ತಿತ್ತು. ಈ ಕಾರಣಕ್ಕೆ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಇದೀಗ ಅವರನ್ನು ಕಟ್ಟುನಿಟ್ಟಾಗಿ ಜೈಲಿನ ನಿಯಮಕ್ಕೆ ಅನುಸಾರವಾಗಿಯೇ ನೋಡಿಕೊಳ್ಳಲಾಗುತ್ತಿದೆ.

ಕಳೆದ ಎಂಟು ದಿನಗಳಲ್ಲಿ ಕಾಫಿ ಸೇವನೆಗೆಂದೇ ದರ್ಶನ್ ಸುಮಾರು 735 ರೂ. ಖರ್ಚು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಎಲ್ಲಾ ಖೈದಿಗಳಂತೆ ಜೈಲಿನಲ್ಲಿರುವ ಕ್ಯಾಂಟೀನ್ ನಿಂದ ಕೆಲವು ವಸ್ತುಗಳನ್ನು ಖರೀದಿ ಮಾಡುತ್ತಿದ್ದಾರೆ. ಇಲ್ಲಿ ಸಿಗರೇಟು, ಮದ್ಯ ಸೇವನೆಗೆ ಅವಕಾಶವಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಚಿತ್ರರಂಗ ಅಷ್ಟೊಂದು ಕೆಟ್ಟು ಹೋಗಿಲ್ಲ: ಮೀಟೂ ಆರೋಪಗಳಿಗೆ ನಟಿ ತಾರಾ ಖಡಕ್ ಪ್ರತಿಕ್ರಿಯೆ