ಹೈದರಾಬಾದ್: ಪುಷ್ಪ ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ನಾಯಕಿಯಾದರೂ ಸಮಂತಾ ಋತು ಪ್ರಭು ಐಟಂ ಸಾಂಗ್ ಹೈಲೈಟ್ ಆಗಿದೆ. ಇದು ರಶ್ಮಿಕಾಗೆ ಕಸಿವಿಸಿ ತಂದಿದೆ ಎನ್ನಲಾಗಿದೆ.
ಸಮಂತಾ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದು, ಆ ಹಾಡಿನ ವಿಡಿಯೋ ಈಗ ಭರ್ಜರಿ ಹಿಟ್ ಆಗಿದೆ. ನಾಯಕಿಗಿಂತ ಐಟಂ ಹಾಡೊಂದರಲ್ಲಿ ಕಾಣಿಸಿಕೊಂಡಿರುವ ಸಮಂತಾರೇ ಹೈಲೈಟ್ ಆಗಿರುವುದು ರಶ್ಮಿಕಾಗೆ ಮುಜುಗರವುಂಟು ಮಾಡಿದೆ ಎನ್ನಲಾಗಿದೆ.
ಪುಷ್ಪ ಚಿತ್ರತಂಡವೂ ಸಮಂತಾ ಕಾಣಿಸಿಕೊಂಡಿರುವ ಐಟಂ ಸಾಂಗ್ ನ್ನೇ ಪ್ರಮೋಟ್ ಮಾಡುತ್ತಿರುವುದು ಚಿತ್ರದ ನಾಯಕಿ ರಶ್ಮಿಕಾ ಬೇಸರಕ್ಕೆ ಕಾರಣವಾಗಿದೆ ಎಂಬ ಮಾತು ಕೇಳಿಬರುತ್ತಿದೆ.