Publish Date: Sat, 04 Dec 2021 (09:29 IST)
Updated Date: Sat, 04 Dec 2021 (09:37 IST)
ಹೈದರಾಬಾದ್: ಇತ್ತೀಚೆಗೆ ವಿದೇಶ ಪ್ರವಾಸ ಹೋಗಿದ್ದ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಈಗ ಭಾರತಕ್ಕೆ ಮರಳಿದ್ದಾರೆ.
ತಾವು ಮತ್ತೆ ತವರಿಗೆ ಮರಳಿರುವ ಫೋಟೋಗಳನ್ನು ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಂದ ಹಾಗೆ ತವರಿಗೆ ಬಂದ ರಶ್ಮಿಕಾರನ್ನು ಅವರ ಮುದ್ದಿನ ನಾಯಿ ಮುದ್ದು ಮಾಡಿ ಸ್ವಾಗತಿಸಿದೆ.
ಪ್ಯಾರಿಸ್ ನಲ್ಲಿ ಸುತ್ತಾಡಿ ಕೆಲವು ದಿನಗಳ ಬ್ರೇಕ್ ಬಳಿಕ ರಶ್ಮಿಕಾ ಮತ್ತೆ ಭಾರತಕ್ಕೆ ಮರಳಿದ್ದಾರೆ. ಇನ್ನೇನು ಪುಷ್ಪ ಬಿಡುಗಡೆಗೆ ಸಿದ್ಧವಾಗಿದ್ದು, ಅದರ ಪ್ರಮೋಷನ್ ಸಮಯಕ್ಕೆ ಸರಿಯಾಗಿ ರಶ್ಮಿಕಾ ಭಾರತಕ್ಕೆ ಮರಳಿದ್ದಾರೆ.