ಹೈದರಾಬಾದ್: ತೆಲುಗು ಸ್ಟಾರ್ ನಟ ಅಲ್ಲು ಅರ್ಜುನ್ ಬಹುಭಾಷಾ ನಟಿ ಪ್ರಿಯಾಮಣಿ ಬಗ್ಗೆ ಹಾಡಿ ಹೊಗಳಿದ್ದಾರೆ.
ತೆಲುಗಿನ ಡ್ಯಾನ್ಸ್ ರಿಯಾಲಿಟಿ ಶೋ ಒಂದಕ್ಕೆ ಅತಿಥಿಯಾಗಿ ಹೋಗಿದ್ದ ಅಲ್ಲು ಅರ್ಜುನ್ ಅಲ್ಲಿದ್ದ ಪ್ರಿಯಾಮಣಿಗೆ ಹೊಗಳಿಕೆ ನೀಡಿದ್ದಾರೆ. ನೀವೀಗ ಸ್ಲಿಮ್ ಮತ್ತು ಹಾಟ್ ಆಗಿದ್ದೀರಿ ಎಂದು ಅಲ್ಲು ಅರ್ಜುನ್ ಹೊಗಳಿದ್ದಾರೆ.
ನಾವಿಬ್ಬರೂ ಒಟ್ಟಾಗಿ ನಟಿಸಲು ಸಾಧ್ಯವಾಗಿಲ್ಲ ಎಂದು ಪ್ರಿಯಾಮಣಿ ಹೇಳಿದಾಗ, ಅಲ್ಲು ಅರ್ಜುನ್, ಹಾಗೆ ಹೇಳಬೇಡಿ. ನಾವು ಜೊತೆಯಾಗಿ ನಟಿಸಲು ಇನ್ನೂ ಅವಕಾಶವಿದೆ. ನೀವೀಗ ಹೆಚ್ಚು ಸ್ಲಿಮ್ ಮತ್ತು ಹಾಟ್ ಆಗಿ ಕಾಣಿಸುತ್ತಿದ್ದೀರಿ ಎಂದಿದ್ದಾರೆ. ಅಲ್ಲು ಅರ್ಜುನ್ ಕಾಮೆಂಟ್ ಕೇಳಿ ಪ್ರಿಯಾಮಣಿ ನಾಚಿ ನೀರಾಗಿದ್ದಾರೆ.