Select Your Language

Notifications

webdunia
webdunia
webdunia
webdunia

ಹೀಗೆ ಕರೀಬೇಡಿ ನನ್ನ! ನಟ ಅಜಿತ್ ಮನವಿಗೆ ಫ್ಯಾನ್ಸ್ ಬೇಸರ

ಹೀಗೆ ಕರೀಬೇಡಿ ನನ್ನ! ನಟ ಅಜಿತ್ ಮನವಿಗೆ ಫ್ಯಾನ್ಸ್ ಬೇಸರ
ಚೆನ್ನೈ , ಗುರುವಾರ, 2 ಡಿಸೆಂಬರ್ 2021 (09:50 IST)
ಚೆನ್ನೈ: ತಮಿಳುನಟ ಅಜಿತ್ ಕುಮಾರ್ ಅವರನ್ನು ಜನ ಪ್ರೀತಿಯಿಂದ ‘ತಲಾ’ ಎಂದು ಕರೆಯುತ್ತಾರೆ. ಇಷ್ಟು ವರ್ಷಗಳಿಂದಲೂ ಇದು ಮುಂದುವರಿದಿದೆ.

ಆದರೆ ಇದೀಗ ಅಜಿತ್ ನನ್ನನ್ನು ‘ತಲಾ’ ಎಂದು ಕರೆಯಬೇಡಿ. ಅಜಿತ್ ಅಥವಾ ಎಕೆ ಎನ್ನಿ ಸಾಕು ಎಂದಿದ್ದಾರೆ. ಆದರೆ ಫ್ಯಾನ್ಸ್ ಗೆ ಮಾತ್ರ ಇದರಿಂದ ಬೇಸರವಾಗಿದೆ.

ಈ ಬಗ್ಗೆ ಸ್ವತಃ ಅಜಿತ್ ಪರವಾಗಿ ಅವರ ಮ್ಯಾನೇಜರ್ ಪ್ರಕಟಣೆ ನೀಡಿದ್ದು ‘ಮುಂದಿನ ದಿನಗಳಲ್ಲಿ ಅಭಿಮಾನಿಗಳು, ಮಾಧ್ಯಮಗಳು ನನ್ನನ್ನು ‘ತಲಾ’ ಎಂಬ ಹೆಸರಿನಿಂದ ಕರೆಯಬಾರದು. ಅಜಿತ್ ಅಥವಾ ಎಕೆ ಎಂದು ಕರೆದರೆ ಸಾಕು. ನಿಮಗೆಲ್ಲಾ ಒಳ್ಳೆಯದಾಗಲಿ’ ಎಂದಿದ್ದಾರೆ. ಆದರೆ ಇದಕ್ಕೆ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಂಧ್ರಪ್ರದೇಶ ನೆರೆ ಪರಿಹಾರಕ್ಕೆ 25 ಲಕ್ಷ ಧನ ಸಹಾಯ ಮಾಡಿದ ಚಿರು, ರಾಮ್ ಚರಣ್