Publish Date: Thu, 02 Dec 2021 (09:00 IST)
Updated Date: Thu, 02 Dec 2021 (09:10 IST)
ಬೆಂಗಳೂರು: ಸೂಪರ್ ಸ್ಟಾರ್ ಮೋಹನ್ ಲಾಲ್ ಅಭಿನಯದ ಮಲಯಾಳಂ ಮೂಲದ ಮರಕ್ಕಾರ್ ಸಿನಿಮಾ ಇಂದು ರಿಲೀಸ್ ಆಗಿದೆ.
ಮಲಯಾಳಂ ಸಿನಿಮಾ ಮಟ್ಟಿಗೆ ಇದು ಇದುವರೆಗಿನ ಬಿಗ್ ಬಜೆಟ್ ಸಿನಿಮಾ. 100 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿರುವ ಐತಿಹಾಸಿಕ ಕತೆಯಿರುವ ಸಿನಿಮಾವನ್ನು ಪ್ರಿಯದರ್ಶನ್ ನಿರ್ದೇಶಿಸಿದ್ದಾರೆ.
ಎಲ್ಲಾ ಸರಿ ಹೋಗಿದ್ದರೆ ಕಳೆದ ವರ್ಷವೇ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಕೊರೋನಾದಿಂದಾಗಿ ಇಷ್ಟು ದಿನ ಮುಂದೂಡಿಕೆಯಾಗಿದೆ. ಬಿಡುಗಡೆಗೂ ಮೊದಲೇ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಸಿನಿಮಾದಲ್ಲಿ ಮೋಹನ್ ಲಾಲ್ ಅಲ್ಲದೆ, ಸುನಿಲ್ ಶೆಟ್ಟಿ, ಅರ್ಜುನ್ ಸರ್ಜಾ, ಪ್ರಭು, ಮಂಜು ವಾರಿಯರ್, ಕೀರ್ತಿ ಸುರೇಶ್ ಸೇರಿದಂತೆ ಘಟಾನುಘಟಿಗಳ ತಾರಾಗಣವೇ ಇದೆ. ವಾರ್ ಸಿನಿಮಾಗಳನ್ನು ಇಷ್ಟಪಡುವವರಿಗೆ ಇದು ಹೇಳಿ ಮಾಡಿಸಿದ ಸಿನಿಮಾ.