Publish Date: Thu, 02 Dec 2021 (10:00 IST)
Updated Date: Thu, 02 Dec 2021 (10:02 IST)
ಹೈದರಾಬಾದ್: ಪ್ರಿನ್ಸ್ ಮಹೇಶ್ ಬಾಬು ಮೊಣಕಾಲಿಗೆ ಶಸ್ತ್ರಚಿಕಿತ್ಸೆಯಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಮಹೇಶ್ ಬಾಬು ಕಡೆಯಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ.
ಕಳೆದ ಕೆಲವು ದಿನಗಳ ಹಿಂದೆ ಮಹೇಶ್ ಬಾಬು ಅಮೆರಿಕಾಗೆ ತೆರಳಿದ್ದರು. ಇದೀಗ ಅಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಹಿಂದೊಮ್ಮೆ ಶೂಟಿಂಗ್ ವೇಳೆ ಮಾಡಿಕೊಂಡಿದ್ದ ಗಾಯಕ್ಕೆ ಅವರೀಗ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ ಎನ್ನಲಾಗುತ್ತಿದೆ.
ಟ್ವಿಟರ್ ನಲ್ಲಿ ಅವರ ಚೇತರಿಕೆಗೆ ಹಾರೈಸಿ ಅಭಿಮಾನಿಗಳು ಟ್ವೀಟ್ ಮಾಡುತ್ತಿದ್ದಾರೆ. ಆದರೆ ಮಹೇಶ‍್ ಬಾಬು ಕಡೆಯಿಂದ ಆರೋಗ್ಯದ ಬಗ್ಗೆ ಅಪ್ ಡೇಟ್ ಬಂದಿಲ್ಲ.