Select Your Language

Notifications

webdunia
webdunia
webdunia
webdunia

ಕಬ್ಜ ಶೂಟಿಂಗ್ ಗೆ ಹಾಜರಾಗಲಿದ್ದಾರೆ ಕಿಚ್ಚ ಸುದೀಪ್

ಕಬ್ಜ ಶೂಟಿಂಗ್ ಗೆ ಹಾಜರಾಗಲಿದ್ದಾರೆ ಕಿಚ್ಚ ಸುದೀಪ್
ಬೆಂಗಳೂರು , ಮಂಗಳವಾರ, 14 ಡಿಸೆಂಬರ್ 2021 (09:20 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ದಲ್ಲಿ ಕಿಚ್ಚ ಸುದೀಪ್ ಕೂಡಾ ಪಾತ್ರ ಮಾಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ.

ಈಗಾಗಲೇ ಚಿತ್ರದಲ್ಲಿ ಸುದೀಪ್ ಪಾತ್ರದ ಅಧಿಕೃತ ಪೋಸ್ಟರ್ ನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಆದರೆ ಸುದೀಪ್ ಇದುವರೆಗೆ ಶೂಟಿಂಗ್ ಆರಂಭಿಸಿರಲಿಲ್ಲ.

ಡಿಸೆಂಬರ್ 15 ರಿಂದ ಸುದೀಪ್‍ ಪಾತ್ರದ ಚಿತ್ರೀಕರಣ ಆರಂಭವಾಗಲಿದೆ ಎಂಬ ಮಾಹಿತಿ ಬಂದಿದೆ. ಈ ಸಿನಿಮಾದಲ್ಲಿ ಭಾರ್ಗವ್ ಭಕ್ಷಿ ಎಂಬ ಪಾತ್ರ ಮಾಡುತ್ತಿದ್ದಾರೆ ಸುದೀಪ್. ಇದು 80 ರ ದಶಕದ ಕತೆ ಹೊಂದಿದ್ದು, ಸುದೀಪ್ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆರ್. ಚಂದ್ರು ನಿರ್ದೇಶನ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ಮಾಡಬೇಕಿದ್ದ ಸಿನಿಮಾಗೆ ಯುವರಾಜ ಕುಮಾರ್ ಹೀರೋ!