Publish Date: Tue, 14 Dec 2021 (09:10 IST)
Updated Date: Tue, 14 Dec 2021 (09:17 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಷ್ಟೋ ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಆದರೆ ಅದೆಲ್ಲವೂ ಈಗ ಅರ್ಧಕ್ಕೇ ನಿಂತಿದೆ. ಆದರೆ ಅಪ್ಪು ಮಾಡಬೇಕಿದ್ದ ಸಿನಿಮಾವೊಂದಕ್ಕೆ ಯುವರಾಜ್ ಕುಮಾರ್ ನಾಯಕರಾಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ರಾಘವೇಂದ್ರ ರಾಜ್ ಕುಮಾರ್ ಪುತ್ರರಾಗಿರುವ ಯುವರಾಜ್ ಈಗಷ್ಟೇ ಚೊಚ್ಚಲ ಸಿನಿಮಾ ಮಾಡುತ್ತಿದ್ದಾರೆ. ಅದಿನ್ನೂ ಶೂಟಿಂಗ್ ಹಂತದಲ್ಲೇ ಇದೆ. ಪುನೀತ್ ನಿಧನದ ಬಳಿಕ ಅವರಲ್ಲೇ ಪುನೀತ್ ರನ್ನು ಕಾಣುವವರೂ ಇದ್ದಾರೆ.
ಸಂತೋಷ್ ಆನಂದ್ ರಾಮ್ ಪುನೀತ್ ಗಾಗಿ ಮಾಡಿದ್ದ ಸ್ಕ್ರಿಪ್ಟ್ ನಲ್ಲಿ ಯುವರಾಜ್ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಬರಬೇಕಿದೆ.