Select Your Language

Notifications

webdunia
webdunia
webdunia
webdunia

ಸದನದಲ್ಲೂ ಪುನೀತ್ ಗೆ ಜೈಕಾರ: ಪದ್ಮ ಪ್ರಶಸ್ತಿಗೆ ಶಿಫಾರಸ್ಸು ಮಾಡುವುದಾಗಿ ಸಿಎಂ ಘೋಷಣೆ

ಸದನದಲ್ಲೂ ಪುನೀತ್ ಗೆ ಜೈಕಾರ: ಪದ್ಮ ಪ್ರಶಸ್ತಿಗೆ ಶಿಫಾರಸ್ಸು ಮಾಡುವುದಾಗಿ ಸಿಎಂ ಘೋಷಣೆ
ಬೆಂಗಳೂರು , ಸೋಮವಾರ, 13 ಡಿಸೆಂಬರ್ 2021 (17:42 IST)
ಬೆಂಗಳೂರು: ಇತ್ತೀಚೆಗೆ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಇಂದು ಸದನದಲ್ಲೂ ಗೌರವ ಸಲ್ಲಿಸಲಾಯಿತು.

ಸ್ಪೀಕರ್, ಸಿಎಂ ಬೊಮ್ಮಾಯಿ, ಶಾಸಕ ಕುಮಾರ್ ಬಂಗಾರಪ್ಪ ಸೇರಿದಂತೆ ಹಲವರು ಪುನೀತ್ ಗುಣಗಾನ ಮಾಡಿದರು. ಅವರು ಮಾಡಿದ ಸಮಾಜ ಸೇವೆಗಳನ್ನು ಸದನದಲ್ಲಿ ಸ್ಮರಿಸಲಾಯಿತು.

ಈ ವೇಳೆ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ‘ಅಲ್ಪ ಸಮಯದಲ್ಲಿ ಒಬ್ಬ ನಟ ಇಷ್ಟು ಸಾಧನೆ ಮಾಡುತ್ತಾನೆ ಎಂಬುದು ಪುನೀತ್ ನಿಧನದ ಬಳಿಕ ಗೊತ್ತಾಯಿತು.ಅವರು ಕೇವಲ ಚಿತ್ರರಂಗಕ್ಕೆ ಸೀಮಿತವಾದ ವ್ಯಕ್ತಿಯಾಗಿರಲಿಲ್ಲ. ಪುನೀತ್ ಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಈಗಾಗಲೇ ಘೋಷಿಸಲಾಗಿದೆ. ಪ್ರಶಸ್ತಿ ನೀಡುವ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಪದ್ಮ ಪ್ರಶಸ್ತಿಗೂ ಪುನೀತ್ ಹೆಸರನ್ನು ಶಿಫಾರಸ್ಸು ಮಾಡಲಾಗುವುದು’ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಂದನ್ ಶೆಟ್ಟಿ ಲ್ಯಾಂರ್ಗಿನಿಯಲ್ಲಿ ರಚಿತಾ ರಾಂ