Select Your Language

Notifications

webdunia
webdunia
webdunia
webdunia

ಪುನೀತ್ ಭಾವಚಿತ್ರ ಹಿಡಿದು ಶಬರಿಮಲೆ ಯಾತ್ರೆ ಕೈಗೊಂಡ ಫ್ಯಾನ್ಸ್

ಪುನೀತ್ ಭಾವಚಿತ್ರ ಹಿಡಿದು ಶಬರಿಮಲೆ ಯಾತ್ರೆ ಕೈಗೊಂಡ ಫ್ಯಾನ್ಸ್
ಬೆಂಗಳೂರು , ಸೋಮವಾರ, 13 ಡಿಸೆಂಬರ್ 2021 (09:45 IST)
ಬೆಂಗಳೂರು: ಮೊನ್ನೆಯಷ್ಟೇ ಅಭಿಮಾನಿಯೊಬ್ಬ ಪುನೀತ್ ರಾಜ್ ಕುಮಾರ್ ಭಾವಚಿತ್ರ ಸಮೇತ 18 ಮೆಟ್ಟಿಲುಗಳೇರಿ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದ ವಿಡಿಯೋ ವೈರಲ್ ಆಗಿತ್ತು. ಈಗ ಅಂತಹದ್ದೇ ಮತ್ತೊಂದು ಘಟನೆ ನಡೆದಿದೆ.

ಪುನೀತ್ ರ ಅಪ್ಪಟ  ಅಭಿಮಾನಿಗಳ ಗುಂಪೊಂದು ಅವರ ಭಾವಚಿತ್ರಗಳನ್ನು ಹಿಡಿದು ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. ಇರುಮುಡಿ ಜೊತೆ ಪುನೀತ್ ಭಾವಚಿತ್ರವನ್ನೂ ತಲೆಮೇಲೆ ಹೊತ್ತು ನಡೆದಿದ್ದಾರೆ.

ಆ ಮೂಲಕ ಪುನೀತ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ. ಬದುಕಿದ್ದಾಗ ಶಬರಿಮಲೆ ಯಾತ್ರೆ ಕೈಗೊಳ್ಳುತ್ತಿದ್ದ ಪುನೀತ್ ಗೆ ನಿಧನದ ಬಳಿಕವೂ ಅಭಿಮಾನಿಗಳು ಈ ರೀತಿ ಗೌರವ ಸಮರ್ಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಿಆರ್ ಕೆ ಪ್ರೊಡಕ್ಷನ್ ಇನ್ಮೇಲೆ ಅಶ್ವಿನಿನೇ ನೋಡ್ಕೊಳ್ತಾರೆ: ರಾಘಣ್ಣ