Publish Date: Thu, 16 Sep 2021 (09:14 IST)
Updated Date: Thu, 16 Sep 2021 (09:19 IST)
ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ಇನ್ ಸ್ಟಾಗ್ರಾಂ ಲೈವ್ ಬಂದಿದ್ದು ಅಭಿಮಾನಿಗಳೊಂದಿಗೆ ಚ್ಯಾಟ್ ನಡೆಸಿದ್ದಾರೆ.
ಈ ವೇಳೆ ಅಭಿಮಾನಿಯೊಬ್ಬರು ಅವರಿಗೆ ನನಗೆ ಮದುವೆ ಆಗಲು ನಿಮ್ಮಂತಹ ಹುಡುಗಿಯೇ ಬೇಕು ಎಂದು ಬೇಡಿಕೆಯಿಟ್ಟಿದ್ದಾರೆ. ಇದಕ್ಕೆ ರಶ್ಮಿಕಾ ಕೂಡಾ ನಗುತ್ತಲೇ ಉತ್ತರಿಸಿದ್ದಾರೆ.
ನಾನೇ ಇದ್ದೀನಲ್ಲಾ ಎಂದು ಮೊದಲು ತಮಾಷೆಯಾಗಿ ಹೇಳಿಕೊಂಡ ರಶ್ಮಿಕಾ ಬಳಿಕ ನನಗೆ ಸದ್ಯಕ್ಕೆ ಮದುವೆಯಾಗುವ ಯೋಜನೆಯಿಲ್ಲ. ನಾನೀಗ ಸಿಂಗಲ್ ಆಗಿಯೇ ಇದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.