Publish Date: Sun, 27 Nov 2022 (08:30 IST)
Updated Date: Sun, 27 Nov 2022 (09:11 IST)
ಬೆಂಗಳೂರು: ಸಂದರ್ಶನವೊಂದರಲ್ಲಿ ಕನ್ನಡ ಸಿನಿಮಾದ ಹೆಸರೂ ಹೇಳದೇ ಧಿಮಾಕು ತೋರಿಸಿದ ರಶ್ಮಿಕಾ ಮಂದಣ್ಣಗೆ ತಿರುಗೇಟು ನೀಡಲು ಕನ್ನಡಿಗರು ತಯಾರಿ ನಡೆಸಿದ್ದಾರೆ.
ರಶ್ಮಿಕಾ ಮೊದಲ ಸಿನಿಮಾ ಕಿರಿಕ್ ಪಾರ್ಟಿ. ಸಂದರ್ಶನವೊಂದರಲ್ಲಿ ಈ ಸಿನಿಮಾ ನಿರ್ಮಾಣ ಸಂಸ್ಥೆಯ ಹೆಸರು ಹೇಳದೇ ಸನ್ನೆ ಮಾಡಿ ಧಿಮಾಕು ತೋರಿಸಿದ ರಶ್ಮಿಕಾಗೆ ರಿಷಬ್ ಶೆಟ್ಟಿ ಅದೇ ರೀತಿ ಸನ್ನೆ ಮಾಡಿ ತಿರುಗೇಟು ನೀಡಿದ್ದರು.
ಕನ್ನಡ ಸಿನಿಮಾ ಬಗ್ಗೆ ಅಸಡ್ಡೆ ತೋರಿದ ರಶ್ಮಿಕಾಗೆ ಬುದ್ಧಿ ಕಲಿಸಲು ನೆಟ್ಟಿಗರು ತೀರ್ಮಾನಿಸಿದ್ದಾರೆ. ಕನ್ನಡ ಚಿತ್ರರಂಗದಿಂದಲೂ ರಶ್ಮಿಕಾರನ್ನು ಬ್ಯಾನ್ ಮಾಡಬೇಕು ಎಂಬ ಮಾತು ಕೇಳಿಬರುತ್ತಿದೆ. ಇದರಿಂದ ರಶ್ಮಿಕಾ ನಾಯಕಿಯಾಗಿರುವ ಪುಷ್ಪ 2 ಮತ್ತು ವಾರಿಸು ಸಿನಿಮಾ ಕರ್ನಾಟಕದಲ್ಲಿ ಸಂಕಷ್ಟ ಎದುರಿಸಲಿದೆ.