Publish Date: Thu, 24 Nov 2022 (08:20 IST)
Updated Date: Thu, 24 Nov 2022 (08:46 IST)
ಬೆಂಗಳೂರು: ದೊಡ್ಮನೆ ಹುಡುಗ, ಪುನೀತ್ ರಾಜ್ ಕುಮಾರ್ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರುವ ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವರಾಜ್ ಕುಮಾರ್ ಸಿನಿಮಾಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.
ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಸಂತೋಷ್ ಆನಂದ್ ರಾಮ್ ನಿರ್ದೇಶನದ ಮೂಲಕ ಯುವರಾಜ್ ಕುಮಾರ್ ಸ್ಯಾಂಡಲ್ ವುಡ್ ಗೆ ಎಂಟ್ರಿಯಾಗಲಿದ್ದಾರೆ.
ಇದೀಗ ಈ ಸಿನಿಮಾದಲ್ಲಿ ಅಭಿನಯಿಸಲು 16 ರಿಂದ 25 ವರ್ಷದೊಳಗಿನ ಯುವ ಕಲಾವಿದರಿಗೆ ಅವಕಾಶ ನೀಡಲಾಗುತ್ತಿದೆ. ಇದಕ್ಕಾಗಿ ಆಡಿಷನ್ ಗೆ ಕರೆ ನೀಡಲಾಗಿದ್ದು, ಮಂಗಳೂರಿನ ಕೂಟಕ್ಕಳ ಅಡಿಟೋರಿಯಂನಲ್ಲಿ ನವಂಬರ್ 26 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಆಡಿಷನ್ ನಡೆಸುತ್ತಿರುವುದಾಗಿ ಹೊಂಬಾಳೆ ಫಿಲಂಸ್ ಪ್ರಕಟಿಸಿದೆ. ಈ ಅವಕಾಶವನ್ನು ಆಸಕ್ತರು ಬಳಸಿಕೊಳ್ಳಬಹುದು.