ಬೆಂಗಳೂರು: ಪೋಷಕ ಕಲಾವಿದರ ಸಂಘದ ಅಧ‍್ಯಕ್ಷ ಡಿಂಗ್ರಿ ನಾಗರಾಜ್ ಮತ್ತು ಅಡುಗೋಡಿ ಶ್ರೀನಿವಾಸ್ ವಿರುದ್ಧ ಅಶ್ಲೀಲ ವಿಡಿಯೋ ಕಳುಹಿಸಿದ ಆರೋಪ ಹೊರಿಸಿದ್ದ ನಟಿ ರಾಣಿ ನಿಜಕ್ಕೂ ಯಾರು ಗೊತ್ತಾ?
ನಾವು ಏನಾದರೂ ಆರೋಪ ಮಾಡಿದರೆ, ನಮ್ಮ ವಿಚಾರ ಹೇಳಲು ಹೋದರೆ ನೀವು ಯಾರು ಹೇಳಲು? ಇಷ್ಟವಿಲ್ಲದಿದ್ದರೆ ಎದ್ದು ಹೋಗಿ ಎನ್ನುವುದಲ್ಲದೆ, ಅಶ್ಲೀಲವಾಗಿ ಮಾತನಾಡುತ್ತಾರೆ ಎಂದು ಹಿರಿಯ ನಟ ಡಿಂಗ್ರಿ ನಾಗರಾಜ್ ಮತ್ತು ಶ್ರೀನಿವಾಸ್ ವಿರುದ್ಧ ಆರೋಪ ಮಾಡಿದ್ದಾರೆ.
ನಟಿ ರಾಣಿ ಎಂದರೆ ಪಕ್ಕನೇ ನೆನಪಿಗೆ ಬರುವುದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಮೃತವರ್ಷಿಣಿ ಧಾರವಾಹಿ. ಈ ಧಾರವಾಹಿಯಲ್ಲಿ ನಾಯಕನ ಚಿಕ್ಕಮ್ಮನ ಪಾತ್ರ ಮಾಡುತ್ತಿದ್ದ ರಾಣಿ ಅನೇಕ ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ನಟಿಸಿದ್ದಾರೆ. ಇದೀಗ ಅವರು ಅಶ್ಲೀಲ ವಿಡಿಯೋ ಕಳುಹಿಸುತ್ತಿದ್ದ ಬಗ್ಗೆ ಆರೋಪ ಮಾಡಿದ್ದು, ಇದರ ವಿರುದ್ಧ ಡಿಂಗ್ರಿ ನಾಗರಾಜ್ ಕೂಡಾ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಗುಡುಗಿದ್ದಾರೆ.