Select Your Language

Notifications

webdunia
webdunia
webdunia
webdunia

ಕೆಜಿಎಫ್ 2 ಹಿಂದಿಕ್ಕಲು ಕಾಂತಾರಗೆ ಇನ್ನು 1.5 ಕೋಟಿ ಮಾತ್ರ ಸಾಕು!

ಕೆಜಿಎಫ್ 2 ಹಿಂದಿಕ್ಕಲು ಕಾಂತಾರಗೆ ಇನ್ನು 1.5 ಕೋಟಿ ಮಾತ್ರ ಸಾಕು!
ಬೆಂಗಳೂರು , ಭಾನುವಾರ, 20 ನವೆಂಬರ್ 2022 (09:03 IST)
Photo Courtesy: Twitter
ಬೆಂಗಳೂರು: ಹೊಂಬಾಳೆ ಫಿಲಂಸ್ ಸ್ಯಾಂಡಲ್ ವುಡ್ ಗೆ ಎರಡು ಬ್ಲಾಕ್ ಬ್ಲಸ್ಟರ್ ಸಿನಿಮಾ ನೀಡಿದೆ. ಈ ಪೈಕಿ ಕೆಜಿಎಫ್ 2 ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ.

ಬಹುಭಾಷೆಗಳಲ್ಲಿ ಬಿಡುಗಡೆಯಾಗಿ ಈ ಸಿನಿಮಾ 1000 ಕೋಟಿ ರೂ. ಬಾಚಿಕೊಂಡಿತ್ತು. ಕಾಂತಾರ ಕೂಡಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದು, ಈಗಾಗಲೇ 400 ಕೋಟಿಯ ಗಡಿಗೆ ಬಂದು ನಿಂತಿದೆ. ಕಡಿಮೆ ಬಜೆಟ್ ನಲ್ಲಿ ನಿರ್ಮಾಣವಾದ ಕಾಂತಾರ ಭರ್ಜರಿ ಗಳಿಕೆ ಮಾಡಿದೆ.

ಕರ್ನಾಟಕದಲ್ಲಿ ಮಾತ್ರ ಕಾಂತಾರ ಈಗ 181.5 ಕೋಟಿ ರೂ. ಗಳಿಕೆ ಮಾಡಿದೆ. ಕೆಜಿಎಫ್ 2 ಕರ್ನಾಟಕದಲ್ಲಿ 183 ಕೋಟಿ ಗಳಿಕೆ ಮಾಡಿತ್ತು. ಇದೀಗ ಕೆಜಿಎಫ್ 2 ಹಿಂದಿಕ್ಕಿ ಕಾಂತಾರಕ್ಕೆ ನಂ.1 ಆಗಲು ಕೇವಲ 1.5 ಕೋಟಿ ರೂ. ಬೇಕಾಗಿದೆ. ಇದೂ ಅಸಾಧ‍್ಯವೇನಲ್ಲ. ನವಂಬರ್ 24 ರಿಂದ ಒಟಿಟಿಯಲ್ಲೂ ಕಾಂತಾರ ತೆರೆ ಕಾಣುತ್ತಿದೆ. ಆ ಬಳಿಕ ಥಿಯೇಟರ್ ನಿಂದ ಸಂಪೂರ್ಣವಾಗಿ ಕಾಂತಾರ ಮರೆಯಾಗಬಹುದು. ಆದರೆ ಅಲ್ಲಿಯವರೆಗೆ ಆ 1.5 ಕೋಟಿ ಗುರಿ ತಲುಪಲು ಅವಕಾಶವಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಕನ್ನಡ 9: ಈ ವಾರ ದೀಪಿಕಾ ದಾಸ್ ಎಲಿಮಿನೇಟ್