ಬೆಂಗಳೂರು: ಕನ್ನಡ ಮತ್ತು ತೆಲುಗು ಕಿರುತೆರೆಯಲ್ಲಿ ಧಾರವಾಹಿಗಳ ಮೂಲಕ ಮನೆ ಮಾತಾಗಿರುವ ನಟಿ ರಶ್ಮಿ ಪ್ರಭಾಕರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ರಶ್ಮಿ ಪ್ರಭಾಕರ್ ತಮ್ಮ ಬಹುಕಾಲದ ಗೆಳೆಯ ನಿಖಿಲ್ ಭಾರ್ಗವ್ ಜೊತೆ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಕಾರ್ಯಕ್ರಮಕ್ಕೆ ಕನ್ನಡ ಕಿರುತೆರೆಯ ಖ್ಯಾತ ಕಲಾವಿದರಾದ ನಿಶಾ ಮಿಲನಾ, ನೇಹಾ ರಾಮಕೃಷ್ಣ, ಚಂದನ್ ಕುಮಾರ್, ಕವಿತಾ ಗೌಡ ಸೇರಿದಂತೆ ಹಲವರು ಆಗಮಿಸಿ ಶುಭ ಹಾರೈಸಿದ್ದಾರೆ.
ಶುಭ ವಿವಾಹ ಧಾರವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ರಶ್ಮಿ ಪ್ರಭಾಕರ್ ಲಕ್ಷ್ಮೀ ಭಾರಮ್ಮಾ ಧಾರವಾಹಿಯ ಚಿನ್ನು ಪಾತ್ರಧಾರಿಯಾಗಿ ಮನೆ ಮಾತಾಗಿದ್ದರು. ಇದೀಗ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿರುವ ನಿಖಿಲ್ ಭಾರ್ಗವ್ ಜೊತೆ ಸಪ್ತಪದಿ ತುಳಿದಿದ್ದಾರೆ.