Select Your Language

Notifications

webdunia
webdunia
webdunia
webdunia

ನನ್ನ ಸಾವೇ ನಿನ್ನ ಮದುವೆ ಉಡುಗೊರೆ ಅಂತ ವಾಟ್ಸಪ್ ಮಾಡಿ ಪ್ರಿಯಕರ ಆತ್ಮಹತ್ಯೆ

lover Chattisgadh sucide ಆತ್ಮಹತ್ಯೆ ಪ್ರಿಯಕರ ಛತ್ತೀಸ್ ಗಢ
bengaluru , ಭಾನುವಾರ, 24 ಏಪ್ರಿಲ್ 2022 (17:17 IST)

ನನ್ನ ಸಾವೇ ನಿನ್ನ ಮದುವೆಗೆ ಉಡುಗೊರೆ ಎಂದು ಪ್ರಿಯಕರನೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಛತ್ತೀಸ್ ಗಢದಲ್ಲಿ ನಡೆದಿದೆ.

ಬಾಲೋದ್ ಜಿಲ್ಲೆಯ ಯುವಕನೊಬ್ಬ ನನ್ನ ಪ್ರೇಯಸಿ ಮತ್ತೊಬ್ಬರನ್ನು ಮದುವೆ ಆಗುತ್ತಿರುವುದನ್ನು ಸಹಿಸದೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಯುವ ಮುನ್ನ ನನ್ನ ಸಾವು ನಿನ್ನ ಮದುವೆಗೆ ಉಡುಗೊರೆ ಎಂದು ಸಂದೇಶ ಕಳುಹಿಸಿದ್ದಾನೆ.

ಆತ್ಮಹತ್ಯೆ ಮಾಡಿಕೊಂಡ ಕೊಠಡಿಯಲ್ಲಿ ಗೋಡೆಯ ಮೇಲೆ ನನ್ನ ಮದುವೆಗೆ ಉಡುಗೊರೆ, ಐ ಲವ್ ಯು ಎಂದು ಬರೆದಿದ್ದಾನೆ. ಅಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವೀಡಿಯೋ ವಾಟ್ಸಪ್ ನಲ್ಲಿ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಹಿಸಿದ್ದಾರೆ. ಅಲ್ಲದೇ ಆತ್ಮಹತ್ಯೆ ಕುರಿತು ಪರಿಶೀಲನೆ ನಡೆಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

78,000 ಮಂದಿಯಿಂದ ತ್ರಿವರ್ಣ ಧ್ವಜ ಹಾರಾಟ: ಪಾಕಿಸ್ತಾನದ 18 ವರ್ಷದ ವಿಶ್ವದಾಖಲೆ ಉಢೀಸ್!